Bengaluru 22°C
Ad

ಐಪಿಎಲ್​ ವಿನ್ನರ್​ಗೆ ಸಿಗುವ ಬಹುಮಾನ ಮೊತ್ತವೆಷ್ಟು ಗೊತ್ತೆ? 4ನೇ ಸ್ಥಾನಿ ಆರ್​ಸಿಬಿಗೆ ಸಿಕ್ಕ ಹಣವೆಷ್ಟು?

17ನೇ ಆವೃತ್ತಿಯ ಐಪಿಎಲ್ ಭಾನುವಾರ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಮುಕ್ತಾಯ ಹಂತದಲ್ಲಿದೆ. ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.

ಚೆನ್ನೈ: 17ನೇ ಆವೃತ್ತಿಯ ಐಪಿಎಲ್ ಭಾನುವಾರ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಮುಕ್ತಾಯ ಹಂತದಲ್ಲಿದೆ. ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಹಾಗದರೆ ಈ ಬಾರಿಯ ವಿಜೇತರಿಗೆ ಸಿಗುವ ಬಹುಮಾನದ ಮೊತ್ತವೆಷ್ಟು ಗೊತ್ತೆ? ಅದರಲ್ಲೂ 4ನೇ ಸ್ಥಾನಿ ಆರ್​ಸಿಬಿಗೆ ಸಿಕ್ಕ ಹಣವೆಷ್ಟು ಗೊತ್ತೆ? ಇಲ್ಲಿದೆ ಮಾಹಿತಿ.

ಫೈನಲ್​ನಲ್ಲಿ ವಿಜೇತ ತಂಡ 20 ಕೋಟಿ ರೂಪಾಯಿ ಬಹುಮಾನವನ್ನು ಪಡೆಯಲಿದೆ. ರನ್ನರ್ ಅಪ್‌ ತಂಡಕ್ಕೆ 15 ಕೋಟಿ ರೂ. ಸಿಗಲಿದೆ. ಮೂರನೇ ಸ್ಥಾನಿಯಾದ ತಂಡಕ್ಕೆ 7 ಕೋಟಿ ಮತ್ತು 4ನೇ ಸ್ಥಾನಿಗೆ 6.5 ಕೋಟಿ ರೂ ಸಿಗಲಿದೆ. ಈಗಾಗಲೇ ರಾಜಸ್ಥಾನ್​ ಮತ್ತು ಆರ್​ಸಿಬಿ ಪ್ಲೇ ಆಫ್​ನಲ್ಲಿ ಸೋಲಿ ಕಂಡು ಕ್ರಮವಾಗಿ 3 ಮತ್ತು ನಾಲ್ಕನೇ ಸ್ಥಾನ ಪಡೆದಿವೆ. ಹೀಗಾಗಿ ರಾಜಸ್ಥಾನ್​ಗೆ(7 ಕೋಟಿ) ಮತ್ತು ಆರ್​ಸಿಬಿಗೆ(6.5 ಕೋಟಿ) ಮೊತ್ತ ಸಿಗಲಿದೆ. ಒಟ್ಟು ಬಹುಮಾನ ಮೊತ್ತ 46.5 ಕೋಟಿ ರೂ. ಆಗಿದೆ.

ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದ ಆಟಗಾರರಿಗೆ 15 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಸದ್ಯ ಆರ್​ಸಿಬಿ ತಂಡದ ವಿರಾಟ್​ ಕೊಹ್ಲಿ ಈ ಬಾರಿಯ ಟೂರ್ನಿಯಲ್ಲಿ 741 ರನ್​ ಬಾರಿಸಿ ಆರೆಂಜ್ ಕ್ಯಾಪ್ ಹೋಲ್ಡರ್​ ಆಗಿದ್ದಾರೆ. ಇವರ ರನ್​ ಹಿಂದಿಕ್ಕಲು ಇನ್ನು ಯಾರಿಗೂ ಅವಕಾಶ ಇಲ್ಲದ ಕಾರಣ ಈ ಪ್ರಶಸ್ತಿ ಇವರಿಗೇ ಸಿಗಲಿದೆ.

https://x.com/thesportzplanet/status/1789260178589634865

Ad
Ad
Nk Channel Final 21 09 2023
Ad