News Karnataka Kannada
Sunday, April 14 2024
Cricket
ಮನರಂಜನೆ

24 ಗಂಟೆಗಳಲ್ಲಿ 112 ಮಿಲಿಯನ್ ವೀಕ್ಷಣೆ ಪಡೆದ ಶಾರುಖ್ ಖಾನ್ ‘ಜವಾನ್’ ಟೀಸರ್

Shah Rukh Khan's 'Jawan' teaser crosses 112 million views in 24 hours
Photo Credit : IANS

ನವದೆಹಲಿ: ಶಾರುಖ್ ಖಾನ್ ಅಭಿನಯದ ‘ಜವಾನ್’ ಚಿತ್ರದ ಪ್ರೀ-ರಿಲೀಸ್ ವಿಡಿಯೋ 24 ಗಂಟೆಗಳ ವೀಕ್ಷಣೆ ಪಡೆದುಕೊಂಡಿದ್ದು, ಭಾರತೀಯ ಚಲನಚಿತ್ರೋದ್ಯಮದಲ್ಲಿ ಟೀಸರ್ ಮತ್ತು ಟ್ರೇಲರ್ ಗಳ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.

ಎಲ್ಲಾ ಪ್ಲಾಟ್ ಫಾರ್ಮ್ ಗಳಲ್ಲಿ 112 ಮಿಲಿಯನ್ ವೀಕ್ಷಣೆಗಳೊಂದಿಗೆ, ಭಾರತೀಯ ಚಲನಚಿತ್ರೋದ್ಯಮದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಮೊದಲ 24 ಗಂಟೆಗಳಲ್ಲಿ ಹೆಚ್ಚು ವೀಕ್ಷಿಸಿದ ವೀಡಿಯೊವಾಗಿ ಜವಾನ್  ಪ್ರೀವ್ಯೂ ಅತ್ಯುನ್ನತ ಸ್ಥಾನದಲ್ಲಿದೆ, ಇದು ಎಸ್ ಆರ್ ಕೆ ಅವರ ವ್ಯಾಪಕ ಜನಪ್ರಿಯತೆ, ಚಿತ್ರದ ಸಾರ್ವತ್ರಿಕ ಆಕರ್ಷಣೆ ಮತ್ತು ಚಿತ್ರದ ಬಿಡುಗಡೆಯ ಸುತ್ತಲಿನ ಹೆಚ್ಚುತ್ತಿರುವ ನಿರೀಕ್ಷೆಗೆ ಸಾಕ್ಷಿಯಾಗಿದೆ.

ವೀಡಿಯೊಗೆ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗಿದ್ದು, ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್ ಟೈನ್ಮೆಂಟ್ ಪ್ರಸ್ತುತಪಡಿಸಿರುವ ಈ ಚಿತ್ರವನ್ನು ಗೌರಿ ಖಾನ್ ನಿರ್ಮಿಸಿದ್ದಾರೆ.  ಸೆಪ್ಟೆಂಬರ್ ೭ ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು