Bengaluru 23°C
Ad

ಅಮೆರಿಕದತ್ತ ಪ್ರಯಾಣ ಬೆಳೆಸಿದ ಟೀಂ ಇಂಡಿಯಾದ ಮೊದಲ ಬ್ಯಾಚ್

ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ಜೂನ್ 2 ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗಾಗಿ ಟೀಂ ಇಂಡಿಯಾದ ಮೊದಲ ಬ್ಯಾಚ್ ಇಂದು ಅಮೆರಿಕದತ್ತ ಪ್ರಯಾಣ ಬೆಳೆಸಿದೆ.

ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ಜೂನ್ 2 ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗಾಗಿ ಟೀಂ ಇಂಡಿಯಾದ ಮೊದಲ ಬ್ಯಾಚ್ ಇಂದು ಅಮೆರಿಕದತ್ತ ಪ್ರಯಾಣ ಬೆಳೆಸಿದೆ.

ಶನಿವಾರ ಯುಎಸ್‌ಗೆ ತೆರಳುತ್ತಿರುವ ಮೊದಲ ಬ್ಯಾಚ್‌ನಲ್ಲಿ ತಂಡದ ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಸೇರಿದಂತೆ ಹಲವು ಆಟಗಾರರಿದ್ದಾರೆ. ಇವರ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಆಟಗಾರರಲ್ಲದೆ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಸಹಾಯಕ ಸಿಬ್ಬಂದಿಯ ಸದಸ್ಯರು ಸಹ ಈ ಆಟಗಾರರೊಂದಿಗೆ ಪ್ರಯಾಣ ಬೆಳೆಸಿದ್ದಾರೆ.

ಈ ಎರಡನೇ ಬ್ಯಾಚ್​ನಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಉಳಿದ ಆಟಗಾರರು ಅಮೇರಿಕಕ್ಕೆ ತೆರಳಲಿದ್ದಾರೆ. ಉಳಿದಂತೆ ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ ಲಂಡನ್​ನಲ್ಲಿದ್ದಾರೆ ಎಂದು ವರದಿಯಾಗಿದೆ.

Ad
Ad
Nk Channel Final 21 09 2023
Ad