News Karnataka Kannada
Sunday, April 21 2024
Cricket
ದೇಶ

ನಟಿ , ರಾಜಕಾರಣಿ ಜಯಪ್ರದಾ ಬಂಧನಕ್ಕೆ ಕೋರ್ಟ್‌ ಮತ್ತೊಮ್ಮೆ ಆದೇಶ

Jaya
Photo Credit : News Kannada

ಬೆಂಗಳೂರು: ಹಿರಿಯ ನಟಿ ಮತ್ತು ರಾಜಕಾರಣಿ ಜಯಪ್ರದಾ ಅವರನ್ನು ಬಂಧಿಸುವಂತೆ ರಾಂಪುರದ ಸಂಸದ/ಶಾಸಕ ನ್ಯಾಯಾಲಯವು ಪೊಲೀಸ್ ವರಿಷ್ಠಾಧಿಕಾರಿಗೆ ಈ ಮುಂಚೆ ಆದೇಶ ನೀಡಿತ್ತು. ವಿಶೇಷ ತಂಡ ರಚಿಸಿ ಮಾಜಿ ಸಂಸದರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶಿಸಲಾಗಿತ್ತು.

ಮಂಗಳವಾರ (ಫೆ.27) ನ್ಯಾಯಾಲಯಕ್ಕೆ ಹಾಜರಾಗಲು ದಿನ ಕೂಡ ನೀಡಿತ್ತು. ನಟಿ ಗೈರಾಗಿದ್ದರಿಂದ ಜಯಪ್ರದಾ ವಿರುದ್ಧ ಸೆಕ್ಷನ್‌ 82ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್‌ ಹೇಳಿದೆ. ಪ್ರಕರಣದ ವಿಚಾರಣೆ ಮಾ.6ರಂದು ಮತ್ತೊಮ್ಮೆ ನಡೆಯಲಿದೆ.

ಹಲವಾರು ಬಾರಿ ಜಾಮೀನು ರಹಿತ ವಾರಂಟ್ (ಎನ್‌ಬಿಡಬ್ಲ್ಯು) ಹೊರಡಿಸಿದ ನಂತರವೂ ಅವರು ಮಂಗಳವಾರ (ಫೆ.27) ಹಾಜರಾಗದಿದ್ದಕ್ಕಾಗಿ ರಾಂಪುರದ ಎಂಪಿ/ಎಂಎಲ್‌ಎ ನ್ಯಾಯಾಲಯವು ಸಿಆರ್‌ಪಿಸಿ ಆದೇಶ 82 ಅನ್ನು ಹೊರಡಿಸಿದೆ. ಈ ಕುರಿತು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಅಮರನಾಥ್ ತಿವಾರಿ ಅವರು, ಜಯಾ ವಿರುದ್ಧ 2019 ರ ಚುನಾವಣಾ ನೀತಿ ಸಂಹಿತೆ ಪ್ರಕರಣ ರಾಂಪುರದ ನ್ಯಾಯಾಲಯದಲ್ಲಿ ಕೇಮ್ರಿ ಪೊಲೀಸ್ ಠಾಣೆ ಮತ್ತು ಸ್ವರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು