Bengaluru 23°C
Ad

ನಿಮ್ಮ ದ್ವೇಷವೇನಿದ್ದರೂ ನನ್ನ ಮೇಲೆ, ನನ್ನ ಪೋಷಕರನ್ನು ಎಳೆಯಬೇಡಿ: ಅರವಿಂದ್ ಕೇಜ್ರಿವಾಲ್

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕೇಜ್ರಿವಾಲ್ ಅವರ ಪೋಷಕರನ್ನು ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದ್ದು, ಬಗ್ಗೆ ಕೇಜ್ರಿವಾಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. 

ನವದೆಹಲಿ: ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕೇಜ್ರಿವಾಲ್ ಅವರ ಪೋಷಕರನ್ನು ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದ್ದು, ಬಗ್ಗೆ ಕೇಜ್ರಿವಾಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ವಯಸ್ಸಾದ ತಂದೆ-ತಾಯಿಯನ್ನು ಪೊಲೀಸ್ ವಿಚಾರಣೆಗೆ ಒಳಪಡಿಸುವುದರ  ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿರುವ ಅರವಿಂದ್ ಕೇಜ್ರಿವಾಲ್, ನಿಮ್ಮ ದ್ವೇಷವೇನಿದ್ದರೂ ನನ್ನ ಮೇಲೆ. ನಮ್ಮಿಬ್ಬರ ನಡುವಿನ ಹೋರಾಟದಲ್ಲಿ ನನ್ನ ಪೋಷಕರನ್ನು ಎಳೆಯಬೇಡಿ ಎಂದಿದ್ದಾರೆ.

‘ನಿಮ್ಮ ಹೋರಾಟವೇನಿದ್ದರೂ ನನ್ನೊಂದಿಗೆ ಇರುವುದು. ನನ್ನ ತಂದೆ-ತಾಯಿ ಅಸ್ವಸ್ಥರಾಗಿದ್ದು, ಅವರಿಗೆ ಕಿರುಕುಳ ನೀಡಬೇಡಿ. ದೇವರು ಎಲ್ಲವನ್ನೂ ನೋಡುತ್ತಿದ್ದಾನೆ” ಎಂದು ಅರವಿಂದ್ ಕೇಜ್ರಿವಾಲ್ ಮೋದಿಗೆ ಮನವಿ ಮಾಡಿದ್ದಾರೆ.

ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಎಎಪಿ ಸಂಸದರ ಮೇಲೆ ಹಲ್ಲೆ ನಡೆಸಿದಾಗ ಕೇಜ್ರಿವಾಲ್ ಅವರ ಪೋಷಕರು ಉಪಸ್ಥಿತರಿದ್ದರು. ಈ ಹಿನ್ನೆಲೆಯಲ್ಲಿ ಈ ವಿಚಾರಣೆಯನ್ನು ನಡೆಸಲು ಪೊಲೀಸರು ಮುಂದಾಗಿದ್ದು, ಅವರ ವಿಚಾರಣೆಯನ್ನು ಮುಂದೂಡಲಾಯಿತು.

ಪ್ರಧಾನಿ ನರೇಂದ್ರ ಮೋದಿಯವರಿಗೆ ಇದು ನನ್ನ ಮನವಿ. ಪ್ರಧಾನಮಂತ್ರಿಯವರೇ, ನೀವು ನನ್ನನ್ನು ಕೆಳಗೆ ಎಳೆಯಲು ಹಲವಾರು ಪ್ರಯತ್ನಗಳನ್ನು ಮಾಡಿದ್ದೀರಿ. ನೀವು ನನ್ನನ್ನು ಬಂಧಿಸಿದ್ದೀರಿ; ತಿಹಾರ್‌ ಜೈಲಿನಲ್ಲಿ ನನಗೆ ಹಲವಾರು ರೀತಿಯಲ್ಲಿ ಕಿರುಕುಳ ನೀಡಿದ್ದೀರಿ. ಆದರೆ, ನಾನು ಅದ್ಯಾವುದಕ್ಕೂ ಮಣಿಯಲಿಲ್ಲ. ಇಂದು ನೀವು ಎಲ್ಲ ಮಿತಿಗಳನ್ನು ದಾಟಿದ್ದೀರಿ. ನೀನು ನನ್ನನ್ನು ಬಂಧಿಸಿದ ದಿನದಿಂದ ನನ್ನ ತಾಯಿಯು ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನನ್ನ ತಂದೆಗೆ 85 ವರ್ಷ ವಯಸ್ಸಾಗಿದೆ. ಪೊಲೀಸರು ಅವರನ್ನು ವಿಚಾರಣೆ ನಡೆಸುವುದು ಸರಿಯಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Ad
Ad
Nk Channel Final 21 09 2023
Ad