Bengaluru 25°C
Ad

ಕಾಂಗ್ರೆಸ್ ನಾಯಕಿ, ನಟಿ ವಿದ್ಯಾ ಕೊಲೆ ಪ್ರಕರಣ: ಆರೋಪಿ ಪತಿಯ ಬಂಧನ

ಕಾಂಗ್ರೆಸ್ ಮುಖಂಡೆ ಹಾಗೂ ನಟಿ ವಿದ್ಯಾ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ, ಪತಿ ನಂದೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು: ಕಾಂಗ್ರೆಸ್ ಮುಖಂಡೆ ಹಾಗೂ ನಟಿ ವಿದ್ಯಾ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ, ಪತಿ ನಂದೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾ ನಂದೀಶ್ ಮೈಸೂರಿನ ಶ್ರೀರಾಮಪುರದಲ್ಲಿ ಪತಿ ಹಾಗೂ ಮಕ್ಕಳ ಜೊತೆ ನೆಲೆಸಿದ್ದರು. ಮದುವೆಯಾದ ಸ್ವಲ್ಪ ದಿನ ಮಾತ್ರ ಸುಖವಾಗಿದ್ದ ವಿದ್ಯಾ, ಆಮೇಲೆ ಗಂಡ ಹಾಗೂ ಅತ್ತೆಯಿಂದ ಕಿರುಕುಳಕ್ಕೆ ಒಳಗಾದಳಂತೆ.

ವಿದ್ಯಾ ಅವರ ಆಸ್ತಿ ಮೇಲೆ ಕಣ್ಣಾಕಿದ್ದ ಗಂಡ ವಿದ್ಯಾಗೆ ಬಹಳ ಹಿಂಸೆ ಕೊಡೋಕೆ ಶುರು ಮಾಡಿದ್ದನಂತೆ. ಅತ್ತೆ ಕಾಟ ಕೊಡೋಕೆ ಆರಂಭಿಸಿದಳಂತೆ. ಹೀಗೆ ಕಳೆದ ಆರು ವರ್ಷದಿಂದಲೂ ಗಂಡನ ಮನೆಯವರ ಜೊತೆ ಜಗಳ ಮಾಡ್ಕೊಂಡೇ ವಿದ್ಯಾ ಸಂಸಾರ ಸಾಗಿಸಿದ್ದಳಂತೆ.

ಬನ್ನೂರಿನ ತುರಗನೂರಿನಲ್ಲಿ ಪತಿಯ ಮನೆಗೆ ಆಕೆ ತೆರಳಿದ್ದಾಗ ಗಲಾಟೆ ನಡೆದಿದೆ ಎನ್ನಲಾಗಿದೆ. ಪತಿ ಹಾಗೂ ಪತ್ನಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ ಈ ಬಾರಿ ಅದು ವಿಕೋಪಕ್ಕೆ ಹೋಗಿ ಕೊಲೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಬನ್ನೂರು ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಪುನೀತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯ ಸ್ನೇಹಿತ ನೀಡಿದ ಸುಳಿವಿನ ಮೇರೆಗೆ ಆರೋಪಿ ನಂದೀಶ್‌ನನ್ನು ಬಂಧಿಸಿದ್ದಾರೆ.

Ad
Ad
Nk Channel Final 21 09 2023
Ad