Bengaluru 22°C
Ad

ಈಗ ವಿಧಾನಸಭೆ ಚುನಾವಣೆ ನಡೆದರೆ ಕಾಂಗ್ರೆಸ್ ಗೆ 35 ಸ್ಥಾನವು ಸಿಗದು: ಸಚಿವ ಪ್ರಹ್ಲಾದ್ ಜೋಶಿ

ಪರಿಷತ್ ಚುನಾವಣಾ ಅಭ್ಯರ್ಥಿ ಅಮರನಾಥ ಪಾಟೀಲ ಪರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಚಾರ ಸಭೆ ನಡೆಸಿದರು.

ಬೀದರ್: ಪರಿಷತ್ ಚುನಾವಣಾ ಅಭ್ಯರ್ಥಿ ಅಮರನಾಥ ಪಾಟೀಲ ಪರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಚಾರ ಸಭೆ ನಡೆಸಿದರು.

ಲೋಕಸಭೆ ಚುನಾವಣೆಯಲ್ಲಿ ಈ ಬಾರಿಯೂ ಕಾಂಗ್ರೆಸ್ ಗೆ ಅಧಿಕೃತ ವಿರೋಧ ಪಕ್ಷದ ಸ್ಥಾನವೂ ಸಿಗುವುದಿಲ್ಲ. ಸಿಎಂ ಮತ್ತು ಡಿಸಿಎಂ ಎಷ್ಟೇ ಜಿಗಿದಾಡಿ ಭಾಷಣ ಮಾಡಿದರೂ ಕರ್ನಾಟಕದಲ್ಲಿ ನಾಲ್ಕಕ್ಕಿಂತ ಹೆಚ್ಚು ಸ್ಥಾನ ಕಾಂಗ್ರೆಸ್ ಬರುವುದಿಲ್ಲ, 24 ಸ್ಥಾನ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕರ್ಮಕಾಂಡ ಮತ್ತು ನಡೆದುಕೊಳ್ಳುವ ರೀತಿ ನೋಡಿದರೆ, ಈಗ ವಿಧಾನಸಭೆ ಚುನಾವಣೆ ಆದಲ್ಲಿ ಈಗಿರುವ 135 ಸ್ಥಾನಗಳಲ್ಲಿ 35 ಸ್ಥಾನವೂ ಬರುವುದಿಲ್ಲ ಎಂದು ಜೋಶಿ ಹೇಳಿದರು.

ಐದು ಗ್ಯಾರಂಟಿಗಳಲ್ಲಿ ಎರಡು‌ ಯೋಜನೆಗಳು ಅವು ಸಹ ಅರ್ದಂಬರ್ಧ ನಡೆಯುತ್ತಿವೆ. ರಸ್ತೆ, ಕಟ್ಟಡ ನಿರ್ಮಾಣ ಕಾಮಗಾರಿ ಇಲ್ಲದಿರುವುದರಿಂದ ಕಾಂಗ್ರೆಸ್ ಶಾಸಕರು ಮತ್ತು ನಾಯಕರ ಕಮಿಷನ್ ಹೊಡೆಯುವುದು ಬಂದ್ ಆಗಿದೆ. ಹಾಗಾಗಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ‌ ದರ ದುಪ್ಪಟ್ಟು ಮಾಡಿದ್ದಾರೆ. ಇದರಿಂದ‌ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ, ಕೊಲೆಯಂತ ಹಿಂಸಾತ್ಮಕ ಕೃತ್ಯಗಳು ಹೆಚ್ಚಲು ಕಾರಣವಾಗಿದೆ ಎಂದು ಜೋಶಿ ಹೇಳಿದರು.

Ad
Ad
Nk Channel Final 21 09 2023
Ad