Bengaluru 23°C
Ad

ಶಾಸಕ ಹರೀಶ್ ಪೂಂಜಾ ಬಂಧಿಸಿದರೆ ರಾಜ್ಯಾದ್ಯಂತ ಹೋರಾಟ: ಶಾಸಕ ರಘುಪತಿ ಭಟ್

Ragupathibhat

ಉಡುಪಿ: ಅಮಾಯಕ ಕಾರ್ಯಕರ್ತನ ಮೇಲೆ ಸುಳ್ಳು ಕೇಸ್‌ ದಾಖಲಿಸಿ ಬಂಧಿಸಿದ ಪೊಲೀಸರನ್ನು ಪ್ರಶ್ನಿಸಿ ಕಾರ್ಯಕರ್ತರ ಬೆಂಬಲಕ್ಕೆ ನಿಂತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಮೇಲೂ ಪ್ರಕರಣ ದಾಖಲಿಸಿ ಬಂಧನಕ್ಕೆ ತೆರಳಿರುವುದು ಖಂಡನೀಯ ಎಂದು ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಈ ರೀತಿಯ ದ್ವೇಷದ ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ, ಸದಾ ಕಾರ್ಯಕರ್ತರ ಜೊತೆ ನಿಲ್ಲುವ ಹರೀಶ್ ಪೂಂಜಾ ಜೊತೆ ನಾವೆಲ್ಲರೂ ಹಿಂದೂ ಪರ ಕಾರ್ಯಕರ್ತರು ಇದ್ದೇವೆ. ಅವರನ್ನು ಬಂಧಿಸಿದರೆ ರಾಜ್ಯಾದ್ಯಂತ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡುತ್ತೇನೆ ಎಂದು ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad