Bengaluru 28°C
Ad

ಹರಳೆಣ್ಣೆ ಮತ್ತು ಹರಳೆಣ್ಣೆ ಗಿಡದ ಎಲೆಗಳಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೆ?

ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ ಎಂದು ಕರೆಯಲ್ಪಡುವ ಈ ಎಣ್ಣೆಯನ್ನು ಹರಳೆಣ್ಣೆಯನ್ನು ತಲೆಗೆ, ಪೂಜೆ ಯಲ್ಲಿ ದೀಪಕ್ಕೆ ಇನ್ನೂ ದೇಹಕ್ಕೆ ಹಚ್ಚಿ ಸ್ನಾನ ಮಾಡುತ್ತಾರೆ.ಈ ಎಣ್ಣೆಯನ್ನು ಬಹಳ ಹಳೆಯ ಕಾಲದಿಂದಲೂ ಉಪಯೋಗಿಸುತ್ತಾ ಬಂದಿರುವುದು ವಿಶೇಷ.

ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ ಎಂದು ಕರೆಯಲ್ಪಡುವ ಈ ಎಣ್ಣೆಯನ್ನು ಹರಳೆಣ್ಣೆಯನ್ನು ತಲೆಗೆ, ಪೂಜೆ ಯಲ್ಲಿ ದೀಪಕ್ಕೆ ಇನ್ನೂ ದೇಹಕ್ಕೆ ಹಚ್ಚಿ ಸ್ನಾನ ಮಾಡುತ್ತಾರೆ.ಈ ಎಣ್ಣೆಯನ್ನು ಬಹಳ ಹಳೆಯ ಕಾಲದಿಂದಲೂ ಉಪಯೋಗಿಸುತ್ತಾ ಬಂದಿರುವುದು ವಿಶೇಷ.

ಈ ಎಣ್ಣೆಯು ಅನೇಕ ಪ್ರಯೋಜನಕಾರಿ ಅಂಶಗಳಿಂದ ಸಮೃದ್ಧವಾಗಿದೆ. ಆಯುರ್ವೇದದಲ್ಲಿ ಈ ಎಣ್ಣೆಯನ್ನು ಬಹಳ ಉಪಯುಕ್ತವೆಂದು ಪರಿಗಣಿಸಲಾಗಿದೆ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ಇನ್‌ಫ್ಲಮೇಟರಿ ಗುಣಗಳಿದ್ದು, ಗಾಯಗಳನ್ನು ವಾಸಿಯಾಗುವುದರಿಂದ ಹಿಡಿದು ಮಲಬದ್ಧತೆ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸುತ್ತದೆ.

ಈ ಹರಳೆಣ್ಣೆ ಗಿಡಗಳು ಖಾಲಿ ಸೈಟುಗಳು, ಬೀದಿ ಬದಿಯಲ್ಲಿ ಎಲ್ಲೆಂದರಲ್ಲಿ ಕಾಣ ಸಿಗುವುದನ್ನು ನಾವು ನೋಡಬಹುದು . ಕೆಲವೆಡೆ ಅದನ್ನು ಕಿತ್ತು ಬಿಸಾಡ್ತಾರೆ. ಈ ಗಿಡಗಳನ್ನು ಕಿತ್ತು ಬಿಸಾಡುವ ಮೊದಲು ಒಮ್ಮೆ ಯೋಚಿಸಿ. ಏಕೆಂದರೆ ಹರಳೆಣ್ಣೆ ಗಿಡಗಳಿಗೆ ಆಯುರ್ವೇದದಲ್ಲಿ ಒಂದು ಒಳ್ಳೆಯ ಸ್ಥಾನವಿದೆ. ಅಲ್ಲದೆ ಇದರ ಎಲೆಗಳು ಮತ್ತು ಕಾಯಿಗಳಲ್ಲಿ ಔಷಧೀಯ ಗುಣವಿದೆ ಎನ್ನುವುದು ನಮ್ಮಲ್ಲಿ ಹಲವರಿಗೆ ತಿಳಿದಿಲ್ಲ.

ಈ ಗಿಡದ ಎಲೆಗಳು ಆರರಿಂದ ಏಳು ಕೈ ಬೆರಳುಗಳ ತರಹದ ಎಲೆಯನ್ನು ಹೊಂದಿರುತ್ತದೆ. ಅಂದರೆ ಒಂದು ಎಲೆಯಲ್ಲಿ ಆರರಿಂದ ಏಳು ಬೆರಳುಗಳಂತೆ ಭಾಗವಾಗಿರುವುದನ್ನು ನಾವು ನೋಡಬಹುದು.. ಈ ಕಾಯಿಗಳಿಂದ ನಾವು ಎಣ್ಣೆಯನ್ನು ತೆಗೆಯುವಂತದ್ದಾಗಿರುತ್ತದೆ. ಈ ಗಿಡಗಳು ತುಂಬಾ ಎತ್ತರವಾಗಿಯೂ ಇರದೆ ಸಣ್ಣದಾಗಿಯೂ ಇರದೆ ಮಧ್ಯಮ ಎತ್ತರದಲ್ಲಿ ಬೆಳೆಯುವಂತದ್ದಾಗಿರುತ್ತದೆ.

​ಹರಳೆಣ್ಣೆ ಗಿಡದ ಎಲೆಗಳಿಂದ ಏನೆಲ್ಲಾ ಉಪಯೋಗಗಳಿವೆ?​
ಈ ಹರಳೆಣ್ಣೆಯ ಗಿಡದಲ್ಲಿ ಅಥವಾ ಅದರ ಎಲೆಗಳಿಂದ ಏನೆಲ್ಲಾ ಮಾಡಬಹುದು ಅಂದರೆ , ಔಷಧಿಗೆ ಹೇಗೆ ಇದನ್ನು ಬಳಸಬಹುದು ನೋಡೋಣ. ಸಾಮಾನ್ಯವಾಗಿ 40 ವರ್ಷ ಮೇಲ್ಪಟ್ಟ ಗಂಡಸರೇ ಆಗಲಿ ಅಥವಾ ಹೆಂಗಸರೇ ಆಗಲಿ ಸಾಮಾನ್ಯವಾಗಿ ಕಾಲು ನೋವು, ಕೈ ನೋವು, ಮಂಡಿ ನೋವು ಸೊಂಟ ನೋವು ಮತ್ತೆ ಕುತ್ತಿಗೆ ನೋವು, ಭುಜಗಳಲ್ಲಿ ನೋವುಗಳಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ನಾವು ಕಾಣುತ್ತೇವೆ. ಅಂತಹ ನೋವಿಗೆ ಈ ಹರಳೆಣ್ಣೆ ಗಿಡದ ಎಲೆಗಳು ರಾಮಬಾಣವೆನ್ನುವುದು ಇಲ್ಲಿ ಕುತೂಹಲಕರವಾದದ್ದು.

ಅದಕ್ಕಾಗಿ ಮಾಡಬೇಕಾದುದಿಷ್ಟೇ. ಹರಳೆಣ್ಣೆ ಗಿಡದ ಒಂದು ಐದಾರು ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಸಣ್ಣಗೆ ಕತ್ತರಿಸಿ ಅದನ್ನು ನೋವಿನ ಎಣ್ಣೆಯಲ್ಲಿ ಹುರಿದು ನಂತರ ಅದನ್ನು ಒಂದು ಬಟ್ಟೆಯಲ್ಲಿ ಕಟ್ಟಿ ನಂತರ ಎಣ್ಣೆಯ ಜೊತೆಗೆ ಹುರಿದ ಹರಳಿನ ಎಲೆಯಿರುವ ಬಟ್ಟೆಯನ್ನು ನೋವಿರುವ ಕಡೆ ಇಡಬೇಕು ಈ ಕ್ರಿಯೆಯನ್ನು ಆಯುರ್ವೇದದಲ್ಲಿ ” ಪತ್ರಪಿಂಡ ಸ್ವೇದ ” ಎಂದು ಕರೆಯುತ್ತಾರೆ.

ಇದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ ಯೂಟ್ಯೂಬ್ ನಲ್ಲಿ ಪತ್ರಪಿಂಡ ಸ್ವೇದವನ್ನು ಹೇಗೆ ತಯಾರಿಸುವುದು ಮತ್ತು ಅದನ್ನು ಎಲ್ಲೆಲ್ಲಿ ಹೇಗೆ ಇಡಬೇಕು ಎನ್ನುವುದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಈ ಎಲೆಯಿರುವ ಗಂಟನ್ನು ಬಿಸಿ ಬಿಸಿಯಾಗಿ ನೋವಿರುವ ಜಾಗಕ್ಕೆ ಇಡುತ್ತಾ ಬರಬೇಕು.

ಅಜೀರ್ಣದ ತೊಂದರೆಗೂ ಕೂಡಾ ಈ ಹರಳೆಣ್ಣೆಯು ಉಪಯೋಗಕಾರಿಯಾಗಿದೆ. ಪ್ರತಿಯೊಂದು ಮನೆಯಲ್ಲಿಯೂ ಹರಳೆಣ್ಣೆ ಇದ್ದರೆ ಆ ಹಳ್ಳಿಯಲ್ಲಿ ವೈದ್ಯರ ಅವಶ್ಯಕತೆಯೇ ಇಲ್ಲ ಎಂದು ಹಿಂದೊಮ್ಮೆ ಗಾಂಧೀಜಿಯವರು ಹೇಳಿದ್ದರು. ಅಷ್ಟೊಂದು ಒಳ್ಳೆಯ ವೈದ್ಯಕೀಯ ಗುಣ ಈ ಹರಳೆಣ್ಣೆಯಲ್ಲಿ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಗಮನಿಸಿ: ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ ಮತ್ತು ಯಾವುದೇ ರೀತಿಯ ಅಡ್ಡ ಪರಿಣಾಮ ಕಂಡುಬಂದಲ್ಲಿ ತಕ್ಷಣವೇ ವೈದ್ಯರಿಗೆ ತಿಳಿಸಿ. ಇದನ್ನು ಬಳಸುವ ಮುನ್ನ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.

Ad
Ad
Nk Channel Final 21 09 2023
Ad