Bengaluru 26°C
Ad

ರೇವ್​ ಪಾರ್ಟಿ ಅಲ್ಲ ಬರ್ತ್‌ಡೇ ಪಾರ್ಟಿ ಎಂದ ನಟಿ ಆಶಿ ರಾಯ್

ನಗರದಲ್ಲಿ ನಡೆದ ರೇವ್ ಪಾರ್ಟಿ ಭಾರೀ ಸಂಚಲನ ಮೂಡಿಸುತ್ತಿದೆ. ನಟಿ ಆಶಿ ರಾಯ್ ಅದು ರೇವ್​ ಪಾರ್ಟಿ ಅಲ್ಲ ಬರ್ತ್‌ಡೇ ಪಾರ್ಟಿ ಎಂದು ಹೇಳಿದ್ದರು. ಪೊಲೀಸರ ಹಾಗೂ ಮಾಧ್ಯಮದವರ ದಾರಿ ತಪ್ಪಿಸುತ್ತಿದ್ದ ನಟಿ ಮಣಿಯರಿಗೆ ಶಾಕಿಂಗ್​ ಸುದ್ದಿಯನ್ನು ಬೆಂಗಳೂರು ಪೊಲೀಸರು ನೀಡಿದ್ದಾರೆ.

ಬೆಂಗಳೂರು: ನಗರದಲ್ಲಿ ನಡೆದ ರೇವ್ ಪಾರ್ಟಿ ಭಾರೀ ಸಂಚಲನ ಮೂಡಿಸುತ್ತಿದೆ. ನಟಿ ಆಶಿ ರಾಯ್ ಅದು ರೇವ್​ ಪಾರ್ಟಿ ಅಲ್ಲ ಬರ್ತ್‌ಡೇ ಪಾರ್ಟಿ ಎಂದು ಹೇಳಿದ್ದರು. ಪೊಲೀಸರ ಹಾಗೂ ಮಾಧ್ಯಮದವರ ದಾರಿ ತಪ್ಪಿಸುತ್ತಿದ್ದ ನಟಿ ಮಣಿಯರಿಗೆ ಶಾಕಿಂಗ್​ ಸುದ್ದಿಯನ್ನು ಬೆಂಗಳೂರು ಪೊಲೀಸರು ನೀಡಿದ್ದಾರೆ.

ಹೇಮಾ ಜೊತೆಗೆ ಹಲವು ತೆಲುಗು ನಟರಿದ್ದರು ಎಂದು ಹೇಳಿರುವ ಬೆಂಗಳೂರು ಪೊಲೀಸರು ಅವರ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಆ ರೇವ್ ಪಾರ್ಟಿಯಲ್ಲಿ ನಾನಿರಲಿಲ್ಲ ಎಂದು ನಟಿ ಹೇಮಾ ವಿಡಿಯೋ ಬಿಡುಗಡೆ ಮಾಡಿದ್ದರು.

ಆಕೆಯ ವಿಡಿಯೋ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬೆಂಗಳೂರು ಪೊಲೀಸರು ಹೇಮಾಳ ಫೋಟೋವನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು.

ಮತ್ತೊಬ್ಬ ತೆಲುಗು ನಟಿ ಅವರೇ ಆಶಿ ರಾಯ್. ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಆಶಿ ರಾಯ್ ಪಾಲ್ಗೊಂಡಿದ್ದರು ಎಂಬ ವರದಿಗಳಿವೆ. ಆಶಿರಾಯ್ ಅವರು ಪಾರ್ಟಿಗೆ ಹೋಗಿದ್ದು ನಿಜ, ಆದರೆ ಅದು ಹುಟ್ಟುಹಬ್ಬದ ಪಾರ್ಟಿ.

ವಾಸು ಎಂಬ ವ್ಯಕ್ತಿ ಸೂರ್ಯಾಸ್ತದಿಂದ ಸೂರ್ಯೋದಯ ಎಂಬ ಪರಿಕಲ್ಪನೆಯೊಂದಿಗೆ ಈ ರೇವ್ ಪಾರ್ಟಿಯನ್ನು ಆಯೋಜಿಸಿದ್ದ. ವಾಸು ತೆಲುಗು ರಾಜ್ಯಗಳಲ್ಲಿ ಬಿಲ್ಡರ್ ಮತ್ತು ಬುಕ್ಕಿಯಾಗಿ ಪ್ರಸಿದ್ಧ ವ್ಯಕ್ತಿ ಎಂದು ವರದಿಯಾಗಿದೆ. ಅವರ ಪರಿಚಯದಿಂದಲೇ ಬರ್ತ್ ಡೇ ಪಾರ್ಟಿಗೆ ಹೋಗಿದ್ದೆ ಎಂದಿದ್ದಾರೆ.

ಅನುಮತಿ ಪಡೆಯದೇ ದೊಡ್ಡ ಮಟ್ಟದಲ್ಲಿ ಪಾರ್ಟಿ ಆಯೋಜಿಸಿ ತಡರಾತ್ರಿಯಲ್ಲಿ ಗಲಾಟೆ ಮಾಡುತ್ತಿದ್ದ ಪಾರ್ಟಿಯ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು.

ಈ ವೇಳೆ ತೆಲುಗು ಸಿನಿಮಾ ನಟ-ನಟಿಯರು ಹಾಗೂ ಶ್ರೀಮಂತರ ಮಕ್ಕಳು, ಉದ್ಯಮಿಗಳ ಮಕ್ಕಳು ಇರುವುದು ಕಂಡುಬಂದಿದ್ದರು. ಮಾದಕ ವಸ್ತುಗಳಾದ ಎಂಡಿಎಂಎ, ಕೊಕೇನ್, ಹೈಡ್ರೋ ಗಾಂಜಾ ಪತ್ತೆಯಾಗಿದ್ದವು. ಪಾರ್ಟಿಯಲ್ಲಿದ್ದವರ ರಕ್ತವನ್ನು ಸ್ಯಾಂಪಲ್​ ಪಡೆದುಕೊಳ್ಳಲಾಗಿತ್ತು.

ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಮಂದಿಯ ಪೈಕಿ 86 ಮಂದಿ ಡ್ರಗ್ ಸೇವನೆ ಮಾಡಿರುವುದು ಖಚಿತವಾಗಿದೆ. ಈ ಪೈಕಿ ಪಾರ್ಟಿಯಲ್ಲಿ ಭಾಗಿಯಾಗಿದ್ದ 73 ಮಂದಿ ಪುರುಷರಲ್ಲಿ 59 ಮಂದಿ ಬ್ಲಡ್ ರಿಪೋರ್ಟ್ ಡ್ರಗ್ಸ್ ಪಾಸಿಟಿವ್ ಬಂದಿದೆ.

30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಡ್ರಗ್ಸ್ ಪಾಸಿಟಿವ್ ಬಂದಿದೆ. ಇದರಲ್ಲಿ ತೆಲುಗು ನಟಿ ಹೇಮಾ ಅವರ ಡ್ರಗ್ಸ್ ರಿಪೋರ್ಟ್ ಕೂಡ ಪಾಸಿಟಿವ್ ಬಂದಿದೆ. ಅದರಲ್ಲಿ ತೆಲುಗು ನಟಿಯರಾದ ಹೇಮಾ ಮತ್ತು ಆಶಿ ರಾಯ್ ಬ್ಲಡ್ ರಿಪೋರ್ಟ್ ಕೂಡ ಪಾಸಿಟಿವ್ ಬಂದಿದೆ.

Ad
Ad
Nk Channel Final 21 09 2023
Ad