Bengaluru 26°C
Ad

ʼರಿಲಯನ್ಸ್‌ ಎಸೋಸಿಯೇಶನ್‌ʼ ಇದರ 27ನೇ ವಾರ್ಷಿಕೋತ್ಸವದ ಅಂಗವಾಗಿ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮ

Marrie

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಹಳೆಯಂಗಡಿ ಗ್ರಾಮ ವ್ಯಾಪ್ತಿಯಲ್ಲಿ ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಂಸ್ಥೆಯಾಗಿ ರಿಲಯನ್ಸ್‌ ಎಸೋಸಿಯೇಶನ್‌ ಹೊರ ಹೊಮ್ಮಿದೆ.
Date

ಇದರ 27ನೇ ವಾರ್ಷಿಕೋತ್ಸವದ ಅಂಗವಾಗಿ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಬರುವ ತಾರೀಕು ಮೇ 26ರ ಆದಿತ್ಯವಾರದಂದು ಬೆಳಗ್ಗೆ 10ಗಂಟೆಯಿಂದ ಎಮ್‌ ಜೆ ಎಮ್‌ ಮಸಿದ್ ಬೊಳ್ಳೂರು ಹಳೆಯಂಗಡಿಯಲ್ಲಿ ನಡೆಯಲಿದೆ.

Ra

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾಬ್‌ ಕಲಂದರ್‌ ಕೌಶಿಕ್‌ ಅಧ್ಯಕ್ಷರು ರಿಲಯನ್ಸ್‌ ಎಸೋಸಿಯೇಶನ್‌ ಬೊಳ್ಳೂರು., ಉದ್ಘಾಟನೆಯನ್ನು ಅಲ್‌ ಹಾಜಿ ಮೊಹಮ್ಮದ್‌ ಅಜಾರ್‌ ಫೈಝ್‌ ಖತೀಬರು ಎಂ.ಜೆ. ಎಂ, ಬೊಳ್ಳೂರು ಮತ್ತು ಖಾಝಿ ಕಿಲ್ತಾನ್‌ ಲಕ್ಷದ್ವೀಪ, ನಿಖಾಃ ಹಾಗು ದುಃವಾ ನೇತೃತ್ವ ಸಯ್ಯದ್‌ ಹಸಿರಲಿ ಸಿಹಾಬ್‌ ತಂಗಳ್‌ ಪಾನಕ್ಕಡ್‌ ಮಲಪುರಂ, ಇನ್ನು ಗೌರವಾಸ್ವಿತ ಅತಿಥಿಯಾಗಿ ಜನಬ್‌ ರಫೀನುದ್ಧೀನ್‌ ಕುದ್ರೊಳಿ ಅಧ್ಯಕ್ಷರು, ದಿಕ್ಸೂಚಿ ಭಾಷಣ ಜನಾಬ್‌ ರಫೀಕ್‌ ಮಾಸ್ಟರ್‌ ಪ್ರಚಾರ ಮುಖ್ಯಸ್ಥರು ಸಂಡೆ ಪೆಂಙಳ್‌ ಅಭಿಯಾನ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Ad
Ad
Nk Channel Final 21 09 2023
Ad