Bengaluru 22°C
Ad

ಆ ಹಾಡು ನನ್ನದು ʻಮಂಜುಮೇಲ್​ ಬಾಯ್ಸ್’ ವಿರುದ್ಧ ಇಳಯರಾಜ ಆರೋಪ

ಇತ್ತೀಚೆಗೆ ರಿಲೀಸ್‌ ಆದ ಮಲಯಾಳಂನ ಸೂಪರ್‌ ಹಿಟ್‌ ಸಿನಿಮಾ ಮಂಜುಮೇಲ್​ ಬಾಯ್ಸ್ ನೋಡುಗರ ಮಚ್ಚುಗೆಗೆ ಪಾತ್ರವಾಗಿತ್ತು. ಇನ್ನೂ ಅದರಲ್ಲಿ ಕಣ್ಮಣಿ ಹಾಡು ಪ್ರಮುಖ ಪಾತ್ರ ವಹಿಸಿತ್ತು.

ಇತ್ತೀಚೆಗೆ ರಿಲೀಸ್‌ ಆದ ಮಲಯಾಳಂನ ಸೂಪರ್‌ ಹಿಟ್‌ ಸಿನಿಮಾ ಮಂಜುಮೇಲ್​ ಬಾಯ್ಸ್ ನೋಡುಗರ ಮಚ್ಚುಗೆಗೆ ಪಾತ್ರವಾಗಿತ್ತು. ಇನ್ನೂ ಅದರಲ್ಲಿ ಕಣ್ಮಣಿ ಹಾಡು ಪ್ರಮುಖ ಪಾತ್ರ ವಹಿಸಿತ್ತು. ಆದರೆ ಮೂಲತಃ ಈ ಹಾಡು ‘ಗುಣ’ ಸಿನಿಮಾದ್ದು ಈ ಚಿತ್ರದಲ್ಲಿ ಈ ಹಾಡನ್ನು ಬಳಕೆ ಮಾಡಲಾಗಿತ್ತು.ಈ ಹಾಡನ್ನು ಅಕ್ರಮವಾಗಿ ಬಳಸಲಾಗಿದೆ ಎಂದು ‘ಗುಣ’ ಚಿತ್ರದ ಸಂಗೀತ ಸಂಯೋಜಕ ಇಳಯರಾಜ ಅವರು ಆರೋಪ ಮಾಡಿದ್ದಾರೆ.

‘ಗುಣ’ ಸಿನಿಮಾ ರಿಲೀಸ್ ಆಗಿದ್ದು 1991ರಲ್ಲಿ. ಈ ಚಿತ್ರಕ್ಕೆ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ‘ಕಣ್ಮಣಿ..’ ಹಾಡು ಗಮನ ಸೆಳೆದಿತ್ತು. ಇದೀಗ ಮಂಜುಮೇಲ್​ ಬಾಯ್ಸ್ ಸಿನಿಮಾದಲ್ಲಿ ಈ ಹಾಡನ್ನು ಯಾವುದೇ ಅನುಮತಿ ಪಡೆಯದೆ ಮರು ಬಳಕೆ ಮಾಡಲಾಗಿದೆ ಎಂದು ಇಳಯರಾಜ ಅವರು ಮಂಜುಮ್ಮೇಲ್ ಬಾಯ್ಸ್’ ನಿರ್ಮಾಣ ಮಾಡಿದ್ದ ಸೌಬಿನ್ ಶಾಹಿರ್ ಅವರಿಗೆ ನೋಟಿಸ್‌ ಕಳಿಸಿದ್ದಾರೆ.

Ad
Ad
Nk Channel Final 21 09 2023
Ad