Bengaluru 26°C
Ad

ಮುಖದಲ್ಲಿ ಕಪ್ಪು ಕಲೆಗಳನ್ನು ತಪ್ಪಿಸಲು ನಿಂಬೆ ಸಹಕಾರಿ

ನಿಂಬೆಹಣ್ಣುಗಳಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳು ಇವೆ. ನಿಂಬೆ ಹಣ್ಣು ದೇಹಕ್ಕೆ ಬೇಕಾದಷ್ಟು ಒಳ್ಳೆಯದನ್ನು ಒದಗಿಸುತ್ತದೆ. ನಿಂಬೆ ವಿಟಾಮಿನ್- ಸಿ ಅನ್ನು ಯಥೇಚ್ಛವಾಗಿ ಹೊಂದಿದೆ.

ನಿಂಬೆಹಣ್ಣುಗಳಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳು ಇವೆ. ನಿಂಬೆ ಹಣ್ಣು ದೇಹಕ್ಕೆ ಬೇಕಾದಷ್ಟು ಒಳ್ಳೆಯದನ್ನು ಒದಗಿಸುತ್ತದೆ. ನಿಂಬೆ ವಿಟಾಮಿನ್- ಸಿ ಅನ್ನು ಯಥೇಚ್ಛವಾಗಿ ಹೊಂದಿದೆ.

ಇದರ ವೈಜ್ಞಾನಿಕ ಹೆಸರು ಸಿಟ್ರಸ್ ಎಂದು ಕರೆಯಲಾಗುತ್ತದೆ. ಕ್ಯಾನ್ಸರ್ ವಿರೋಧಿಯಾಗಿ ನಿಂಬೆಹಣ್ಣು ಕೆಲಸ ಮಾಡುತ್ತದೆ. ಬಾಯಿಯಲ್ಲಿ ಹುಣ್ಣುಗಳು ಉಂಟಾದರೆ ನಿಂಬೆ ಜ್ಯೂಸ್ ಸೇವನೆಯಿಂದ ಹೋಗಲಾಡಿಸಬಹುದು. ಸಿಟ್ರಸ್ ಹಣ್ಣುಗಳ ಸಿಪ್ಪೆಗಳು ರಾಸಾಯನಿಕಗಳನ್ನ ಹೊಂದಿದ್ದರಿಂದ ಅವು ಕ್ಯಾನ್ಸರ್ ವಿರೋಧಿಯಾಗಿ ಕೆಲಸ ಮಾಡುತ್ತವೆ.

ನಿಂಬೆ ರಸ ಅಥವಾ ಜ್ಯೂಸ್ ಮೂತ್ರದಲ್ಲಿನ ಸಿಟ್ರೇಟ್ ಮಟ್ಟ ಹೆಚ್ಚಿಗೆ ಮಾಡುತ್ತದೆ. ಪದೇ ಪದೇ ಮೂತ್ರವಿಸರ್ಜನೆ ಮಾಡುವುದರಿಂದ ಮೂತ್ರಪಿಂಡದಲ್ಲಿ ಸ್ಟೋನ್ ಆಗದಂತೆ ಸಹಾಯ ಮಾಡುತ್ತದೆ. ನಿಂಬೆ ಹಣ್ಣಿನ ಜ್ಯೂಸ್ ಸೇವನೆ ಮಾಡುವುದರಿಂದ ಕರುಳಿನ ಭಾಗ ಸ್ವಚ್ಛವಾಗುತ್ತದೆ.

ನಿಂಬೆಹಣ್ಣಿನ ಸಿಪ್ಪೆ ಮತ್ತು ತಿರುಳಿನಲ್ಲಿ ಪೆಕ್ಟಿನ್ ಎಂಬ ಕರಗುವ ಫೈಬರ್ ಇರುತ್ತದೆ. ಇದು ಕರುಳಿನಲ್ಲಿ ಜೀರ್ಣಕಾರಿ ಕಿಣ್ವಗಳ ಉತ್ಪಾದನೆ ಹೆಚ್ಚು ಮಾಡಿ ನಮ್ಮ ದೇಹದಿಂದ ಬೇಡವಾದ ವಸ್ತುವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಫೈಬರ್ ಕಂಟೆಂಟ್ ಇರೋ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಸಮ ಪ್ರಮಾಣದಲ್ಲಿ ಇರುವಂತೆ ಮಾಡುತ್ತದೆ. ಹೀಗಾಗಿ ಇದು ಶುಗರ್​ ಕಾಯಿಲೆ ಹೊಂದಿರುವವರೆಗೆ ಹೆಚ್ಚು ಉತ್ತಮವಾಗಿದೆ.

ನಿಂಬೆಯಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ, ಇದು ವಯಸ್ಸಾದ ವಿರೋಧಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದ ರಂಧ್ರಗಳಿಂದ ಹೊರಬರುವ ಹೆಚ್ಚುವರಿ ಎಣ್ಣೆ ನಿಯಂತ್ರಿಸುತ್ತದೆ. ಇದರಿಂದ ನಮಗೆ ಮೊಡವೆಗಳಿಂದ ಪರಿಹಾರ ನೀಡುತ್ತದೆ. ಮುಖದಲ್ಲಿ ಕಪ್ಪು ಕಲೆಗಳನ್ನು ತಪ್ಪಿಸಲು ನಿಂಬೆ ಪ್ರಯೋಜನಕಾರಿ.

ಹೆಚ್ಚು ದೇಹದ ತೂಕ ಹೊಂದಿರುವವರು ಬೇಸಿಗೆ ಬಿಸಿಲನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ದೇಹದಲ್ಲಿ ಬೊಜ್ಜಿನ ಅಂಶ ಹೆಚ್ಚಾಗಿ ಇರುವುದರಿಂದ ಬಿಸಿಲಿನಲ್ಲಿ ಆರೋಗ್ಯಕ್ಕೆ ಹೆಚ್ಚು ಅಸ್ವಸ್ಥತೆ ಉಂಟಾಗುತ್ತದೆ. ಇಂತಹ ಸಮಯದಲ್ಲಿ ದೇಹದ ತೂಕ ಕಡಿಮೆ ಮಾಡಲು ವಿಟಮಿನ್- ಸಿ ಇರೋ ನಿಂಬೆಹಣ್ಣಿನ ಜ್ಯೂಸ್ ಕುಡಿಯಬಹುದು.

 

Ad
Ad
Nk Channel Final 21 09 2023
Ad