Bengaluru 26°C
Ad

1 ವರ್ಷದ ಮಗು ತೀವ್ರ ರಕ್ತಸ್ರಾವದ ಜೊತೆಗೆ ಹೃದಯಾಘಾತದಿಂದ ಮೃತ್ಯು

ಜನ್ಮ ಕೊಟ್ಟ ತಾಯಿಯ ಎದುರೇ 1 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಅಮೆರಿಕಾದಲ್ಲಿ ಓಹಿಯೋದಲ್ಲಿ ನಡೆದಿದೆ.

ವಾಷಿಂಗ್ಟನ್‌: ಜನ್ಮ ಕೊಟ್ಟ ತಾಯಿಯ ಎದುರೇ 1 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಅಮೆರಿಕಾದಲ್ಲಿ ಓಹಿಯೋದಲ್ಲಿ ನಡೆದಿದೆ.

ಕಳೆದ ಮೇ 5ರಂದು ಕರೀಂ ಕೀಟಾ ಅನ್ನೋ ಬಾಲಕನ ಶವ ಮನೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು 23 ವರ್ಷದ ಎಡ್ವರ್ಡ್ ಮುರ್ರೆ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿಚಾರಣೆ ನಡೆಸಿದಾಗ ಮಗುವಿನ ಸಾವಿಗೆ ಅಸಲಿ ಕಾರಣ ಏನು ಅನ್ನೋದು ಪತ್ತೆಯಾಗಿದೆ.

1 ವರ್ಷದ ಕರೀಂ ಕೀಟಾ ಎಂಬ ಮಗು ತನ್ನ ತಾಯಿ ಜೊತೆ ವಾಸವಿತ್ತು. ತಾಯಿ ಅಮೀನತಾ ಕೀಟಾಗೆ 3 ತಿಂಗಳ ಹಿಂದಷ್ಟೇ ಎಡ್ವರ್ಡ್ ಮುರ್ರೆ ಪರಿಚಯವಾಗಿದೆ.

ಬಾಯ್ ಫ್ರೆಂಡ್‌ ಎಡ್ವರ್ಡ್ ಮುರ್ರೆ ಅಮೀನತಾ ಮನೆಗೆ ಹೋಗಿದ್ದಾನೆ. ಆಗ ಕರೀಂ ಕೀಟಾಗೆ ಊಟ ಮಾಡಿಸಲು ಪ್ರಯತ್ನಿಸಿದ್ದಾನೆ. ಊಟ ಮಾಡಲು ಮಗು ಹಠ ಮಾಡಿದ್ದರಿಂದ ರಕ್ತ ಬರುವಂತೆ ಹೊಡೆದಿದ್ದಾನೆ.

ಜೋರಾದ ಹೊಡೆತಕ್ಕೆ ನಲುಗಿದ ಕರೀಂ ಮಗುವಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದ ಜೊತೆಗೆ ಹೃದಯಾಘಾತದಿಂದ ಮಗು ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಮಗು ಹೃದಯಾಘಾತದಿಂದ ಸಾವನ್ನಪ್ಪಿದ್ದರೂ ಹೊಡೆದ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

Ad
Ad
Nk Channel Final 21 09 2023
Ad