Bengaluru 27°C
Ad

ಅಂಗಡಿ ಮಾಲೀಕರಿಂದ ಲಂಚ ಕೇಳುತ್ತಿರುವ ಹೊಯ್ಸಳ ಪೊಲೀಸರು: ವಿಡಿಯೋ ವೈರಲ್

ರಕ್ಷಕರೇ ಭಕ್ಷಕರಾದ ಘಟನೆಯೊಂದು ಬೆಂಗಳೂರಿನ ರಾಜಗೋಪಾಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೀಣ್ಯ ಎರಡನೇ ಹಂತದ ಬಳಿ ನಡೆದಿದೆ.

ಬೆಂಗಳೂರು: ರಕ್ಷಕರೇ ಭಕ್ಷಕರಾದ ಘಟನೆಯೊಂದು ಬೆಂಗಳೂರಿನ ರಾಜಗೋಪಾಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೀಣ್ಯ ಎರಡನೇ ಹಂತದ ಬಳಿ ನಡೆದಿದೆ.

ಹೌದು ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಅಂಗಡಿ ಮಾಲೀಕರಿಂದ ಲಂಚ ಪಡೆಯುತ್ತಿದ್ದ ವೇಳೆ ಸಾರ್ವಜನಿಕರು ಅದನ್ನು ವಿಡಿಯೋ ಮಾಡಿದ್ದು, ಇದನ್ನು ಗಮನಿಸಿದ ಪೊಲೀಸರು ತಕ್ಷಣ ಅಲ್ಲಿಂದ ವೇಗವಾಗಿ ಜಾಗ ಖಾಲಿ ಮಾಡಿದ್ದಾರೆ.

ಹೊಯ್ಸಳ ವಾಹನದ ಸಿಬ್ಬಂದಿ ಅಂಗಡಿಯವರಿಂದ ಹಣ ವಸೂಲಿ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಅದನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದ ನಂತರ ವಾಹನದ ಚಾಲಕ ಆತುರಾತುರವಾಗಿ ಘಟನಾ ಸ್ಥಳದಿಂದ ದೂರ ಹೋಗಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಉಪ ಆಯುಕ್ತ(ಉತ್ತರ) ಸೈದುಲು ಅದಾವತ್ ಅವರುತಿಳಿಸಿದ್ದಾರೆ.

Ad
Ad
Nk Channel Final 21 09 2023
Ad