Bengaluru 22°C
Ad

ಬಾಲಿವುಡ್​ ನಟ ನವಾಜುದ್ದೀನ್ ಸಿದ್ಧಿಖಿ ಸಹೋದರನ ಬಂಧನ

ಬಾಲಿವುಡ್​ನ ಅತ್ಯಂತ ಬೇಡಿಕೆಯ ನಟ ನವಾಜುದ್ಧೀನ್ ಸಿದ್ಧಿಖಿಯ ಸಹೋದರ ಅಯಾಜುದ್ಧೀನ್ ಸಿದ್ಧಿಖಿಯನ್ನು ಉತ್ತರ ಪ್ರದೇಶದ ಮುಝಫರ್​ನಗರ ಜಿಲ್ಲೆಯ ಬುಧಾನಾ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ.

ಮುಂಬೈ:  ಬಾಲಿವುಡ್​ನ ಅತ್ಯಂತ ಬೇಡಿಕೆಯ ನಟ ನವಾಜುದ್ಧೀನ್ ಸಿದ್ಧಿಖಿಯ ಸಹೋದರ ಅಯಾಜುದ್ಧೀನ್ ಸಿದ್ಧಿಖಿಯನ್ನು ಉತ್ತರ ಪ್ರದೇಶದ ಮುಝಫರ್​ನಗರ ಜಿಲ್ಲೆಯ ಬುಧಾನಾ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ.

ಅಯಾಜುದ್ಧೀನ್, ಸ್ಥಳೀಯ ನ್ಯಾಯಾಲಯಕ್ಕೆ, ನಕಲಿ ಜಿಲ್ಲಾಧಿಕಾರಿಗಳ ಆದೇಶದ ಪ್ರತಿಯೊಂದನ್ನು ನೀಡಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಲು ಯತ್ನಿಸಿರುವ ಆರೋಪ ಹೊರಿಸಲಾಗಿದೆ.

ಅಯಾಜುದ್ಧೀನ್ ಹಾಗೂ ಇಕ್ಬಾಲ್ ಎಂಬುವರ ನಡುವೆ ಜಮೀನು ಕುರಿತಾದಂತೆ ವ್ಯಾಜ್ಯ ಬಹಳ ಸಮಯದಿಂದಲೂ ನಡೆಯುತ್ತಿದ್ದು, ಇತ್ತೀಚೆಗೆ ಜಿಲ್ಲಾಧಿಕಾರಿಗಳು ಜಮೀನಿನ ಕುರಿತಾಗಿ ಮಾಡಿದ್ದಾರೆ ಎನ್ನಲಾದ ಆದೇಶವೊಂದನ್ನು ನವಾಜುದ್ಧೀನ್ ಸಹೋದರ ಅಯಾಜುದ್ಧೀನ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ಇದು ನಕಲಿ ಎನ್ನಲಾಗುತ್ತಿದ್ದು, ಇದೇ ಕಾರಣಕ್ಕೆ ಪೊಲೀಸರು ಅಯಾಜುದ್ಧೀನ್ ಅನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಮಾರ್ಚ್ 2024ರಂದು ಜಿಲ್ಲಾಧಿಕಾರಿಗಳೇ ಅಯಾಜುದ್ಧೀನ್ ವಿರುದ್ಧ ಪ್ರಕರಣ ದಾಖಲಿಸಿ, ತಮ್ಮ ದಾಖಲೆಯನ್ನು ನಕಲಿ ಮಾಡಿದ ಆರೋಪ ಹೊರಿಸಿದ್ದರು.  ಐಪಿಸಿ ಸೆಕ್ಷನ್​ಗಳಾದ 420, 467, 468, 471 ಗಳನ್ನು ಅಯಾಜುದ್ಧೀನ್ ಮೇಲೆ ಹೊರಿಸಲಾಗಿದೆ.

ನವಾಜುದ್ದೀನ್ ಕಿರಿಯ ಸಹೋದರ ಶಮಾಸ್ ವಿರುದ್ಧವೂ ಸಹ ಈ ಹಿಂದೆ ಪ್ರಕರಣ ದಾಖಲಾಗಿತ್ತು. ನವಾಜುದ್ಧೀನ್​ರ ಪತ್ನಿ ಆಲಿಯಾ, ನವಾಜುದ್ಧೀನ್​ರ ಕಿರಿಯ ಸಹೋದರ ಶಮಾಸ್ ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ದೂರು ದಾಖಲಿಸಿದ್ದರು.

Ad
Ad
Nk Channel Final 21 09 2023
Ad