Bengaluru 26°C
Ad

ಶಾಸಕರನ್ನು ಬಂಧನ ಮಾಡಿದ್ರೆ ಜಿಲ್ಲೆಯ ಬಂದ್‌ಗೆ ಕರೆ ನೀಡುತ್ತೇವೆ; ಸಂಸದ ‌ಕಟೀಲು ಆಕ್ರೋಶ

Kateel

ಬೆಳ್ತಂಗಡಿ: ಶಾಸಕ ಹರೀಶ್‌ ಪೂಂಜಾ ಅವರನ್ನು  ಬಂಧನ ಮಾಡಿದ್ರೆ ಜಿಲ್ಲೆಯ ಬಂದ್‌ಗೆ ಕರೆ ನೀಡುತ್ತೇವೆ ಎಂದು ಸಂಸದ ನಳಿನ್ ಕುಮಾರ್ ‌ಕಟೀಲು ಆಕ್ರೋಶ ಹೊರಹಾಕಿದ್ದಾರೆ.

ಶಾಸಕ ಹರೀಶ್‌ ಪೂಂಜಾ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತ ನಾಡಿದ ಅವರು, ಶಾಸಕರ ಮೇಲೆ ಕೇಸು ದಾಖಲಿಸುವ ಹೀನ ಕೃತ್ಯ ಪೊಲೀಸರು ಮಾಡಿದ್ದಾರೆ. ಅನ್ಯಾಯದ ವಿರುದ್ಧ ಹೋರಾಟದಲ್ಲಿ ಶಾಸಕರು ಭಾಗಿ ಆಗೋದು ಸಾಮಾನ್ಯ. ನಿರಪರಾಧಿ ಬಂಧನ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಕೇಸು ಹಾಕಿದೆ.

ಕೇಸು ಹಾಕುವ ದ್ವೇಷದ ರಾಜಕೀಯ ಮಾಡುತ್ತಿದೆ. ಇಂತಹ ಪ್ರಕರಣ ಹತ್ತಾರು ಪ್ರಕರಣ ರಾಜ್ಯದಲ್ಲಿ ಆಗಿದೆ. ಹಿಂದೆ ನನ್ನ ಮೇಲೆ 3 ಪ್ರಕರಣ ಆಗಿತ್ತು. ನನಗೆ ಮನೆಗೆ ಬಂದು ನೋಟಿಸ್ ಜಾರಿ ಮಾಡಿಲ್ಲ. ಶಾಸಕರ ಜನಪ್ರಿಯತೆ ಸಹಿಸದೆ ಸಣ್ಣ ಕಾರಣ ಇಟ್ಟು ಬಂಧಿಸುವ ಕಾರ್ಯಕ್ಕೆ ಕೈ ಹಾಕಿದೆ. ನೋಟಿಸ್ ಕೊಟ್ಟು ಹೋಗಬೇಕಾದವರು ಬಂಧಿಸುದಕ್ಕೆ ಮುಂದಾಗಿದ್ದಾರೆ. ಶಾಸಕರ ಮೇಲೆ ಬಂಧನ ಮಾಡುವ ಕೇಸ್ ಇಲ್ಲ.

ನೋಟಿಸ್ ಕೊಟ್ಟು ಉತ್ತರಕ್ಕೆ ಅವಕಾಶ ನೀಡಬೇಕು. ಏಕಾಏಕಿ ಬಂಧಿಸಲೇ ಬೇಕಾಂತ ಮಾಡಿದ ಹಾಗೆ ಇದೆ. ನಿಯಮ ಮೀರಿ ಸಂವಿಧಾನ ಮೀರಿ ಪೊಲೀಸರು ವರ್ತನೆ ಮಾಡಿದ್ದಾರೆ. ಕಾನೂನಿಗೆ ಗೌರವ ಕೊಟ್ಟು ನೋಟಿಸ್ ತೆಗೆದುಕೊಂಡಿದ್ದಾರೆ. ಶಾಸಕರು ಐದು ದಿನಗಳ ಕಾಲಾವಾಕಾಶ ಕೇಳಿದ್ದಾರೆ. ಇದಕ್ಕೂ ಮೀರಿ ಒತ್ತಡ ಹಾಕಿದ್ರೆ ಇಡೀ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುತ್ತೇವೆ.

ಯಾವುದೇ ರಾಜಕೀಯ ಒತ್ರಡಕ್ಕೆ ಪೊಲೀಸರು ಮಣಿಯಬಾರದು. ಶಾಸಕರನ್ನು ಬಂಧನ ಮಾಡಿದ್ರೆ ದ.ಕ ಜಿಲ್ಲೆ ಬಂದ್‌ಗೆ ಕರೆ ನೀಡುತ್ತೇವೆ ಎಂದು ಸಂಸದ ನಳೀನ್ ಕುಮಾರ್ ಕಟೀಲು ಹೇಳಿಕೆ ನೀಡಿದ್ದಾರೆ.

Ad
Ad
Nk Channel Final 21 09 2023
Ad