Bengaluru 26°C
Ad

ಸ್ಮಾರ್ಟ್‌ಫೋನ್‌ ಇದೀಗ ಭಾರತದ ನಾಲ್ಕನೇ ಅತಿದೊಡ್ಡ ರಫ್ತು ವಸ್ತು

ಸ್ಮಾರ್ಟ್‌ಫೋನ್‌ ಇದೀಗ ಭಾರತದ ನಾಲ್ಕನೇ ಅತಿದೊಡ್ಡ ರಫ್ತು ಎನಿಸಿಕೊಂಡಿದೆ. 2024ನೇ ಹಣಕಾಸು ವರ್ಷದಲ್ಲಿ ಶೇ. 42 ರಷ್ಟು ಬೆಳವಣಿಗೆಯೊಂದಿಗೆ 15.6 ಶತಕೋಟಿ ಡಾಲರ್‌ ತಲುಪುವ ಮೂಲಕ ಹಿಂದಿನ ವರ್ಷದ ರ್ಯಾಂಕಿಂಗಿಂತಲೂ ಒಂದು ಕೈ ಮುಂದೆ ಸಾಗಿದೆ.

ನವದೆಹಲಿ : ಸ್ಮಾರ್ಟ್‌ಫೋನ್‌ ಇದೀಗ ಭಾರತದ ನಾಲ್ಕನೇ ಅತಿದೊಡ್ಡ ರಫ್ತು ಎನಿಸಿಕೊಂಡಿದೆ. 2024ನೇ ಹಣಕಾಸು ವರ್ಷದಲ್ಲಿ ಶೇ. 42 ರಷ್ಟು ಬೆಳವಣಿಗೆಯೊಂದಿಗೆ 15.6 ಶತಕೋಟಿ ಡಾಲರ್‌ ತಲುಪುವ ಮೂಲಕ ಹಿಂದಿನ ವರ್ಷದ ರ್ಯಾಂಕಿಂಗಿಂತಲೂ ಒಂದು ಕೈ ಮುಂದೆ ಸಾಗಿದೆ.

ವಾಣಿಜ್ಯ ಇಲಾಖೆ ಅಂಕಿಅಂಶಗಳ ಪ್ರಕಾರ, ಸ್ಮಾರ್ಟ್‌ಫೋನ್‌ ರಫ್ತು ಹೆಚ್ಚಳವು ಯುನೈಟೆಡ್‌ ಸ್ಟೇಟ್ಸ್‌ಗೆ 5.6 ಶತಕೋಟಿ ಡಾಲರ್‌ಗೆ ಸಾಗಣೆಯಲ್ಲಿ ಶೇ. 158 ರಷ್ಟು ಹೆಚ್ಚಳವಾಗಿದೆ. ನಂತರದ ಸ್ಥಾನದಲ್ಲಿ ಯುನೈಟೆಡ್‌ಅರಬ್‌ ಎಮಿರೆಟ್ಸ್‌ (2.6 ಶತಕೋಟಿ), ನೆದರ್‌ಲ್ಯಾಂಡ್‌(1.2 ಶತಕೋಟಿ ಡಾಲರ್‌), ಮತ್ತು ಯುನೈಟೆಡ್‌ ಕಿಂಗ್‌ಡಮ್‌(1.1 ಶತಕೋಟಿ ಡಾಲರ್‌) ಇವೆ.

ಹಣಕಾಸು ವರ್ಷ 2024 ರಲ್ಲಿ ಭಾರತದಲ್ಲಿ ರಫ್ತು ಮತ್ತು ದೇಶಿಯ ಮಾರುಕಟ್ಟೆಗಳಿಗಾಗಿ ಉತ್ಪಾದಿಸಲಾದ ಮೊಬೈಲ್‌ ಡಿವೈಸ್‌ಗಳ ಮೌಲ್ಯವು 4.1 ಟ್ರಿಲಿಯನ್‌( 49.16 ಶತಕೋಟಿ ಡಾಲರ್‌ ) ಏರಿಕೆ ಕಂಡಿದೆ. ಇಂಡಿಯನ್‌ ಸೆಲ್ಯುಲರ್‌ ಮತ್ತು ಎಲೆಕ್ಟ್ರಾನಿಕ್ಸ್‌ ಅಸೋಸಿಯೇಷನ್‌ ನ ಪ್ರಾಥಮಿಕ ಅಂದಾಜಿನ ಪ್ರಕಾರ ವರ್ಷದಿಂದ ವರ್ಷಕ್ಕೆ ಕನಿಷ್ಠ 17 ಪ್ರತಿಶತದಷ್ಟು ಏರಿಕೆಯಾಗಿದೆ. ಇದು ದೇಶದಲ್ಲಿನ ಮೊಬೈಲ್‌ ಪ್ರಾಬಲ್ಯ ಪ್ರತಿನಿಧಿಸುತ್ತದೆ.

Ad
Ad
Nk Channel Final 21 09 2023
Ad