Bengaluru 26°C
Ad

ಚುನಾವಣಾ ಪ್ರಚಾರ ವೇಳೆ ವೇದಿಕೆ ಕುಸಿದು 9 ಸಾವು : ಭಯಾನಕ ದೃಶ್ಯ ವೈರಲ್‌

ಚುನಾವಣಾ ಪ್ರಚಾರ ವೇಳೆ ಬೃಹತ್‌ ಸುಂಟರಗಾಳಿಗೆ ವೇದಿಕೆ ಕುಸಿದು 9 ಮಂದಿ ಸಾವನಪ್ಪಿದ್ದು ಹಲವರು ಗಾಯಗೊಂಡಿರುವ ಭಯಾನಕ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

ಚುನಾವಣಾ ಪ್ರಚಾರ ವೇಳೆ ಬೃಹತ್‌ ಸುಂಟರಗಾಳಿಗೆ ವೇದಿಕೆ ಕುಸಿದು 9 ಮಂದಿ ಸಾವನಪ್ಪಿದ್ದು ಹಲವರು ಗಾಯಗೊಂಡಿರುವ ಭಯಾನಕ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.ಮೆಕ್ಸಿಕನ್ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ಈ ಅವಾಂತರ ನಡೆದಿದೆ. ಉತ್ತರ ಮೆಕ್ಸಿಕನ್ ರಾಜ್ಯದ ನ್ಯೂವೊ ಲಿಯಾನ್‌ನಲ್ಲಿ ಈ ಘಟನೆ ನಡೆದಿದೆ.ಇದೀಗ ಈ ಭಯಾನಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ,ಬೆಚ್ಚಿ ಬೀಳಿಸುವಂತಿದೆ.

ಮೆಕ್ಸಿಕೋದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾದ ಜಾರ್ಜ್ ಅಲ್ವಾರೆಜ್ ಮೈನೆಜ್ ಅವರು ಚುನಾವಣಾ ಭಾಷಣ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಇದ್ದಕಿದ್ದಂತೆ ಸುಂಟರಗಾಳಿ ಬೀಸಿದ್ದು ವೇದಿಕೆ ಕುಸಿದಿದ್ದು ಈ ವೇಳೆ ಜಾರ್ಜ್ ಮತ್ತು ವೇದಿಕೆಯಲ್ಲಿದ್ದವರು ರಕ್ಷಿಸಿಕೊಳ್ಳಲು ಓಡುವುದನ್ನು ವಿಡಿಯೋದಲ್ಲಿ ಗಮನಿಸಬಹುದು.

ಗಾಳಿಯ ರಭಸಕ್ಕೆ ನಾವಿದ್ದ ವೇದಿಕೆಯು ಕುಸಿದು ಬಿದ್ದಿದೆ. ನಾನು ಸುರಕ್ಷಿತನಾಗಿದ್ದೇನೆ. ಆದರೆ ಈ ಘಟನೆಯಲ್ಲಿ ಮಡಿದವರಿಗೂ ಮತ್ತು ಗಾಯಗೊಂಡವರಿಗೂ ನಾನು ಸಂತಾಪ ಸೂಚಿಸುತ್ತೇನೆ ಎಂದಿದ್ದಾರೆ. ಅಧ್ಯಕ್ಷೀಯ ಅಭ್ಯರ್ಥಿ ಜಾರ್ಜ್ ಅಲ್ವಾರೆಜ್ ಮೈನೆಜ್ ಅವರು ಘಟನೆಯ ಬಳಿಕ ಟ್ವಿಟ್ ಮಾಡಿದ್ದಾರೆ.

 

 

Ad
Ad
Nk Channel Final 21 09 2023
Ad