Bengaluru 22°C
Ad

ತ್ರೈಮಾಸಿಕ ನಷ್ಟದಲ್ಲೂ ವಾರ್ಷಿಕ ಆದಾಯದಲ್ಲಿ ಭರ್ಜರಿ ಏರಿಕೆ ಕಂಡ ಪೇಟಿಎಂ

ಪೇಟಿಎಂ 2024ರ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಮಿಶ್ರಾನುಭವ ಪಡೆದಿದೆ.

ಪೇಟಿಎಂ 2024ರ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಮಿಶ್ರಾನುಭವ ಪಡೆದಿದೆ. ತ್ರೈಮಾಸಿಕ ಅವಧಿಯಲ್ಲಿ ಒಂದಷ್ಟು ನಿರೀಕ್ಷಿತ ನಿರಾಸೆ ಹೊರತುಪಡಿಸಿ, 2023-24ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಅದು ಉತ್ತಮ ಸಾಧನೆ ತೋರಿರುವುದು ಕಂಡು ಬಂದಿದೆ.2023-24ರಲ್ಲಿ ಪೇಟಿಎಂ ಆದಾಯ 9,978 ಕೋಟಿ ರೂನಷ್ಟಾಗಿದೆ. ಒಂದು ವರ್ಷದಲ್ಲಿ ಆದಾಯದಲ್ಲಿ ಶೇ. 25ರಷ್ಟು ಹೆಚ್ಚಾಗಿದೆ. ಕಂಪನಿಯ ಪೂರ್ಣ ವರ್ಷದ EBITDA ಮೊದಲ ಬಾರಿಗೆ 559 ಕೋಟಿ ರೂ.ಗೆ ತಲುಪಿದೆ

ಪೇಟಿಎಂ ತ್ರೈಮಾಸಿಕ ವರದಿಯಲ್ಲಿ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ 550 ಕೋಟಿ ರೂ ನಷ್ಟ ಕಂಡಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್​ನಲ್ಲಿ 169 ಕೋಟಿ ರೂ ನಷ್ಟವಾಗಿತ್ತು. ಈ ಬಾರಿ ಆ ನಷ್ಟ ಹಿಗ್ಗಿದೆ. ಇದೇ ಅವಧಿಯಲ್ಲಿ ರೆವಿನ್ಯೂ ಅಥವಾ ಆದಾಯ 2,267 ಕೋಟಿ ರೂನಷ್ಟಿದೆ. ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಇದರಲ್ಲಿ ಶೇ. 3ರಷ್ಟು ಇಳಿಮುಖವಾಗಿದೆ. ಆದರೆ, ಒಟ್ಟಾರೆ ಒಂದು ವರ್ಷದ ನೋಟ ನೋಡಿದಾಗ ಆದಾಯದಲ್ಲಿ ಶೇ. 25ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ.

Ad
Ad
Nk Channel Final 21 09 2023
Ad