Bengaluru 22°C
Ad

ಮಗುವಿನ ಜೆಂಡರ್ ರಿವೀಲ್ ಪಾರ್ಟಿ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಂಡ ಯೂಟ್ಯೂಬರ್‌

ಗರ್ಭಿಣಿ ಹೊಟ್ಟೆಯಲ್ಲಿರುವ ಮಗುವಿನ ಲಿಂಗಪತ್ತೆ ಪರೀಕ್ಷೆ ಮಾಡುವುದಕ್ಕೆ ಭಾರತದಲ್ಲಿ ನಿರ್ಬಂಧವಿದೆ. ಆದರೆ ದುಬೈ ಸೇರಿದಂತೆ ಹಲವು ದೇಶಗಳಲ್ಲಿ ಲಿಂಗ ಪತ್ತೆ ಪರೀಕ್ಷೆ ಮಾಡಲು ಅನುಮತಿ ನೀಡಲಾಗಿದೆ.

ಚೆನ್ನೈ: ಗರ್ಭಿಣಿ ಹೊಟ್ಟೆಯಲ್ಲಿರುವ ಮಗುವಿನ ಲಿಂಗಪತ್ತೆ ಪರೀಕ್ಷೆ ಮಾಡುವುದಕ್ಕೆ ಭಾರತದಲ್ಲಿ ನಿರ್ಬಂಧವಿದೆ. ಆದರೆ ದುಬೈ ಸೇರಿದಂತೆ ಹಲವು ದೇಶಗಳಲ್ಲಿ ಲಿಂಗ ಪತ್ತೆ ಪರೀಕ್ಷೆ ಮಾಡಲು ಅನುಮತಿ ನೀಡಲಾಗಿದೆ.

ಇದರ ಲಾಭ ಪಡೆದುಕೊಂಡ ತಮಿಳುನಾಡಿನ ಯೂಟ್ಯೂಬರ್‌ ಒಬ್ಬರು ಜೆಂಡರ್ ರಿವೀಲ್ ಪಾರ್ಟಿ ಮಾಡಿ ತೀವ್ರ ಸಂಚಲನ ಸೃಷ್ಟಿಸಿದ್ದಾರೆ.

ತಮಿಳುನಾಡು ಯ್ಯೂಟೂಬರ್ ಇರ್ಫಾನ್ ಎಂಬುವವರು ದುಬೈನಲ್ಲಿ ಲಿಂಗ ಪತ್ತೆ ಪರೀಕ್ಷೆ ಮಾಡಿಸಿಕೊಂಡು ಬಂದು ಚೆನ್ನೈನಲ್ಲಿ ಜೆಂಡರ್ ರಿವೀಲ್ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿ ವಿಡಿಯೋ ವೈರಲ್ ಆಗಿದ್ದು, ಯ್ಯೂಟೂಬರ್ ಇರ್ಫಾನ್ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದ್ದು,  ಭಾರತದಲ್ಲಿ ಜೆಂಡರ್ ರಿವೀಲ್ ಪಾರ್ಟಿ ಸೆಲೆಬ್ರೇಟ್ ಮಾಡಿರೋದಕ್ಕೆ ಲೀಗಲ್ ನೋಟಿಸ್ ನೀಡಲಾಗಿದೆ.

ಇರ್ಫಾನ್ ಅವರು ಮೂಲತಃ ಫುಡ್ ವ್ಲಾಗರ್ ಆಗಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ 4 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್‌ ಇದ್ದಾರೆ. ಈ ಚಾನೆಲ್‌ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

ಇತ್ತೀಚೆಗೆ ಇರ್ಫಾನ್ ಅವರು ತನ್ನ ಪತ್ನಿಯ ಜೊತೆ ದುಬೈ ಪ್ರವಾಸಕ್ಕೆ ಹೋಗಿದ್ದಾರೆ. ದುಬೈನಲ್ಲೇ ಲಿಂಗ ಪತ್ತೆ ಪರೀಕ್ಷೆ ಮಾಡಿಸಿಕೊಂಡು ಬಂದಿದ್ದಾರೆ. ಇದಾದ ಬಳಿಕ ಕಳೆದ ಮೇ 2ರಂದು ಭಾರತದಲ್ಲಿ ತನ್ನ ಸ್ನೇಹಿತರು, ಸಂಬಂಧಿಕರ ಜೊತೆ ಜೆಂಡರ್ ರಿವೀಲ್ ಪಾರ್ಟಿ ಮಾಡಿ ಸೆಲೆಬ್ರೇಟ್ ಮಾಡಿದ್ದರು. ಮೇ 18ರಂದು ಈ ವಿಡಿಯೋ ಅಪ್ಲೋಡ್ ಮಾಡದ್ದಾರೆ.

ಜೆಂಡರ್ ರಿವೀಲ್ ಪಾರ್ಟಿಯ ವಿಡಿಯೋ ಗಮಿನಿಸಿರುವ ತಮಿಳುನಾಡು ಆರೋಗ್ಯ ಇಲಾಖೆ ಯೂಟ್ಯೂಬರ್‌ಗೆ ನೋಟಿಸ್ ಕೊಟ್ಟಿದೆ.

ಲಿಂಗ ಪರೀಕ್ಷೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. Pre-Conception and Pre-Natal Diagnostic Techniques (PC-PNDT) Act ಈ ಕಾನೂನು ಭಾರತದಲ್ಲಿ ಅನ್ವಯವಾಗುತ್ತದೆ.

Ad
Ad
Nk Channel Final 21 09 2023
Ad