Bengaluru 26°C
Ad

ದಿನೇಶ್​ ಕಾರ್ತಿಕ್​ ನಿವೃತ್ತಿ ಬೆನ್ನಲ್ಲೇ ಫಾಫ್​ ನಿವೃತ್ತಿ ಘೋಷಣೆ ಸಾಧ್ಯತೆ

ನಿನ್ನೆ  ನಡೆದ ರೋಚಕ ಪಂದ್ಯದಲ್ಲಿ ರಾಜಸ್ಥಾನ್​​ ರಾಯಲ್ಸ್​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಟೀಮ್​​ ಸೋಲು ಕಂಡು ಪ್ಲೇ ಆಫ್​​ನಿಂದ ಅಧಿಕೃತವಾಗಿ ಹೊರಬಿದ್ದಿದೆ.

ನಿನ್ನೆ  ನಡೆದ ರೋಚಕ ಪಂದ್ಯದಲ್ಲಿ ರಾಜಸ್ಥಾನ್​​ ರಾಯಲ್ಸ್​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಟೀಮ್​​ ಸೋಲು ಕಂಡು ಪ್ಲೇ ಆಫ್​​ನಿಂದ ಅಧಿಕೃತವಾಗಿ ಹೊರಬಿದ್ದಿದೆ.

ಈ ಮಧ್ಯೆ ಇದು ದಿನೇಶ್​ ಕಾರ್ತಿಕ್​ ಕೊನೆ ಸೀಸನ್​ ಆಗಿದ್ದು, ಐಪಿಎಲ್​ನಿಂದ ನಿವೃತ್ತಿ ಆಗಿದ್ದಾರೆ. ಇದೇ ಹೊತ್ತಲ್ಲೇ ಆರ್​​ಸಿಬಿಗೆ ಮತ್ತೊಂದು ಶಾಕಿಂಗ್​ ನ್ಯೂಸ್​ ಕಾದಿದೆ.

ಆರ್​​ಸಿಬಿ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​ ಕೂಡ ಮುಂದಿನ ಸೀಸನ್​ಗೆ ಲಭ್ಯರಾಗೋದು ಡೌಟ್​ ಎಂದು ತಿಳಿದು ಬಂದಿದೆ. ಫಾಫ್​ ಡುಪ್ಲೆಸಿಸ್​ಗೆ 39 ವರ್ಷ. ಮುಂದಿನ ಸೀಸನ್​ ವೇಳೆಗೆ ಫಾಫ್​ ಡುಪ್ಲೆಸಿಸ್​ಗೆ 40 ವರ್ಷ ಆಗಲಿದೆ. ಹಾಗಾಗಿ ಎಲ್ಲಾ ಮಾದರಿ ಕ್ರಿಕೆಟ್​ಗೂ ಫಾಫ್​ ನಿವೃತ್ತಿ ಘೋಷಿಸೋ ಸಾಧ್ಯತೆ ಇದೆ.

ಫಾಫ್​ ನಿವೃತ್ತಿ ನಂತರ  ಆರ್​​ಸಿಬಿ ತಂಡಕ್ಕೆ ಹೊಸ ಕ್ಯಾಪ್ಟನ್​ ಬೇಕಿದೆ. ಅದು ಲಾಂಗ್​ ಟರ್ಮ್​ ದೃಷ್ಟಿಯಿಂದ ರಜತ್​ ಪಾಟಿದಾರ್​ಗೆ ಕ್ಯಾಪ್ಟನ್ಸಿ ಪಟ್ಟ ನೀಡಲಾಗುವುದು ಎಂದು ವರದಿಯಾಗಿದೆ.

Ad
Ad
Nk Channel Final 21 09 2023
Ad