Bengaluru 22°C
Ad

ಕುಡಿತದ ನಶೆ: ಪತ್ನಿಯ ತಲೆಗೆ ಸಲಾಕೆಯಿಂದ ಹೊಡೆದು ಕೊಂದ ಪತಿರಾಯ

ಕುಡಿದ ನಶೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣಬರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ: ಕುಡಿದ ನಶೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣಬರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಫಕ್ಕೀರವ್ವ ಕಾಕಿ (35) ಹತ್ಯೆಯಾದ ಮಹಿಳೆ. ಕಂಠ ಪೂರ್ತಿ ಕುಡಿದು ಮನೆಗೆ ಬಂದ ಯಲ್ಲಪ್ಪ ಕಾಕಿ, ಪತ್ನಿ ಜತೆಗೆ ಜಗಳವಾಡಿದ್ದಾನೆ. ಮಾತಿನ ಚಕಮಕಿ ನಡುವೆಯೇ ಫಕ್ಕೀರವ್ವ ನಿದ್ದೆ ಮಾಡಲು ಹೋದಾಗ ಜಗಳ ವಿಕೋಪಕ್ಕೆ ತಿರುಗಿದೆ.

ಸಿಟ್ಟಾದ ಯಲ್ಲಪ್ಪ ಮನೆಯಲ್ಲಿದ್ದ ಸಲಾಕೆಯಿಂದ ಹೊಡೆದಿದ್ದಾನೆ. ಇಬ್ಬರು ಮಕ್ಕಳ ಎದುರೇ ಫಕ್ಕೀರವ್ವ ತೀವ್ರ ರಕ್ತಸ್ರಾವವಾಗಿ ಮಲಗಿದ್ದಲ್ಲೇ ಮೃತಪಟ್ಟಿದ್ದಾಳೆ. ಪತ್ನಿಯನ್ನು ಹತ್ಯೆ ಮಾಡಿದ ಯಲ್ಲಪ್ಪ ಸ್ಥಳದಿಂದ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೇಸರಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಪರಾರಿ ಆಗಿರುವ ಆರೋಪಿ ಯಲ್ಲಪ್ಪನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad