Bengaluru 26°C
Ad

‘ಡೆವಿಲ್’ ಚಿತ್ರ ಕ್ರಿಸ್‌ಮಸ್ 2024 ಬೆಳ್ಳಿತೆರೆ ಮೇಲೆ ಬರಲಿದೆ : ದರ್ಶನ್

‘ಡೆವಿಲ್’ ಆಗಿ ಅವತಾರ ತಾಳಿರುವ ದರ್ಶನ್ ಮುಂಬರುವ ಸಿನಿಮಾದ ರಿಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಡೆವಿಲ್’ ಚಿತ್ರವು ಇದೇ ಕ್ರಿಸ್‌ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ.

‘ಡೆವಿಲ್’ ಆಗಿ ಅವತಾರ ತಾಳಿರುವ ದರ್ಶನ್ ಮುಂಬರುವ ಸಿನಿಮಾದ ರಿಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಡೆವಿಲ್’ ಚಿತ್ರವು ಇದೇ ಕ್ರಿಸ್‌ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ.

ನಿಮ್ಮ ಪ್ರೀತಿ ಮತ್ತು ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ ಎಂದು ಎಕ್ಸ್‌ನಲ್ಲಿ ದರ್ಶನ್ ಮಾಹಿತಿ ನೀಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ದರ್ಶನ್ ನಟನೆಯ ಡೆವಿಲ್ ಸಿನಿಮಾಗೆ ನಾಯಕಿಯ ಆಯ್ಕೆಯಾಗಿದೆ.

ವಾಮನ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ತುಳುನಾಡ ಕುವರಿ ರಚನಾ ರೈ ಅವರು ಡೆವಿಲ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ವಿಚಾರವನ್ನು ಕಳೆದ ವಾರ ಚಿತ್ರತಂಡ ಅನೌನ್ಸ್ ಮಾಡಿದ್ದರು.

ಈ ಹಿಂದೆ ಇವರು ಶಂಕರ್ ರಾಮನ್ ನಿರ್ದೇಶನದಲ್ಲಿ ಮೂಡಿ ಬಂದ ‘ವಾಮನ’ ಚಿತ್ರಕ್ಕೆ ನಾಯಕಿಯಾಗಿದ್ದರು. ಈ ಹಿಂದೆ ತುಳು ಸಿನಿಮಾವೊಂದರಲ್ಲಿ ನಟಿಸಿದ್ದ ರಚನಾಗೆ ವಾಮನ ಮೊದಲ ಕನ್ನಡ ಸಿನಿಮಾವಾಗಿತ್ತು.

ಬ್ಯಾಡ್ಮಿಂಟನ್ ಪ್ಲೇಯರ್ ಆಗಿರುವ ಈ ತುಳುನಾಡ ಚೆಲುವೆ, ಮಾಡೆಲ್, ಡ್ಯಾನ್ಸರ್ ಹಾಗೇ ಬರಹಗಾರ್ತಿ ಕೂಡ. ಓ ಮೈ ಡಾಗ್ ಎಂಬ ಪುಸ್ತಕ ಬರೆದಿರುವ ರಚನಾ ಸಕಲಕಲಾವಲ್ಲಭೆ. ಈಗ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ದರ್ಶನ್ ಮತ್ತು ರಚನಾ ಮೊದಲ ಬಾರಿಗೆ ಜೋಡಿಯಾಗುತ್ತಿರೋದ್ರಿಂದ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ.ಇತ್ತೀಚೆಗೆ ‘ಡೆವಿಲ್’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆದ ಬೆನ್ನಲ್ಲೇ ಅದರ ತೆರೆಹಿಂದಿನ ಝಲಕ್ ಹೇಗಿತ್ತು ಎಂಬುದನ್ನು ಇದೀಗ ರಿವೀಲ್ ಮಾಡಿದ್ದಾರೆ. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿತ್ತು.

ಫೆಬ್ರವರಿಯಲ್ಲಿ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿತ್ತು. ಈಗ ಇದರ ವಿಡಿಯೋ ಬಿಡಲಾಗಿದೆ. ಕಲರ್‌ಫುಲ್ ಲೋಕೇಷನ್‌ನಲ್ಲಿ ದರ್ಶನ್ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.

Ad
Ad
Nk Channel Final 21 09 2023
Ad