Bengaluru 23°C
Ad

ಡಿವೈಎಸ್​ಪಿ ಬ್ಯಾಂಕ್​ ಖಾತೆಗಳಿಗೆ ಖನ್ನ: ಬರೋಬ್ಬರಿ 15,98,761 ರೂ. ದೋಚಿದ ಖದೀಮರು

ಡಿವೈಎಸ್​ಪಿ ಬ್ಯಾಂಕ್​ ಖಾತೆಗಳಿಗೆ ಕನ್ನ ಹಾಕಿ 2 ಬ್ಯಾಂಕ್ ಖಾತೆಯಿಂದ 15,98,761 ರೂ. ಖದೀಮರು ಎಗರಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ: ಡಿವೈಎಸ್​ಪಿ ಬ್ಯಾಂಕ್​ ಖಾತೆಗಳಿಗೆ ಕನ್ನ ಹಾಕಿ 2 ಬ್ಯಾಂಕ್ ಖಾತೆಯಿಂದ 15,98,761 ರೂ. ಖದೀಮರು ಎಗರಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.ಹಾಸನ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪಿ.ಕೆ.ಮುರಳೀಧರ್ ಅವರ ಖಾತೆಯಿಂದ ಸೈಬರ್ ಖದೀಮರು ಹಣ ಎಗರಿಸಿದ್ದಾರೆ. 2 ಬ್ಯಾಂಕ್ ಖಾತೆಗಳಿಂದ ಬರೋಬ್ಬರಿ 15,98,761 ಲಕ್ಷ ರೂ ಎಗರಿಸಿದ್ದಾರೆ. ಘಟನೆ ಸಂಬಂಧ ಹಾಸನ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೇ.20 ರಂದು ಮಧ್ಯಾಹ್ನ 1.30ರ ಸಮಯದಲ್ಲಿ ಫೋನ್​ಗೆ ಬಂದ ಮೆಸೇಜ್‌ಗಳ ಮೂಲಕ ಖದೀಮರ ಕೈಚಳಕ ಗಮನಕ್ಕೆ ಬಂದಿದೆ. ಡಿವೈಎಸ್‌ಪಿ ಅವರ ಬ್ಯಾಂಕ್‌ ಖಾತೆಗಳಿಂದ ಅಧಿಕಾರಿಯ ಗಮನಕ್ಕೆ ಬಾರದೆ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ.

 

Ad
Ad
Nk Channel Final 21 09 2023
Ad