News Karnataka Kannada
Saturday, April 13 2024
Cricket
ಹಾಸನ

ಹಾಸನ- ಸಕಲೇಶಪುರ ಹೆದ್ದಾರಿ ಕಾಮಗಾರಿ: ೨೦೨೪ರ ಮಾರ್ಚ್ ವೇಳೆಗೆ ಪೂರ್ಣ- ಸತೀಶ್ ಜಾರಕಿಹೊಳಿ

Tunnel on NH-75: Satish Jarkiholi to take necessary action after union minister's nod
Photo Credit : News Kannada

ಹಾಸನ: ಬೆಂಗಳೂರು- ಮಂಗಳೂರು ಸಂಪರ್ಕಕ್ಕೆ ಪ್ರಮುಖ ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ಪರ್ಯಾಯ ಶಿರಾಡಿ ಸುರಂಗ ಮಾರ್ಗ ನಿರ್ಮಿಸುವ ಚಿಂತನೆ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ರಾಷ್ಟ್ರೀಯ ೭೫ ಹೆದ್ದಾರಿ ಕಾಮಗಾರಿ ವೀಕ್ಷಣೆ ಹಾಗೂ ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈಗಾಗಲೇ ಈ ಮಾರ್ಗದ ವಿಚಾರದಲ್ಲಿ ಡೆಮೊ ನೋಡಲಾಗಿದೆ. ಕೇಂದ್ರ ಸಾರಿಗೆ ಸಚಿವರನ್ನು ಜೂನ್-೨೬( ಸೋಮವಾರ) ಭೇಟಿ ಮಾಡಿ ಸಮಾಲೋಚನೆ ಮಾಡಲಾಗುವುದು ನಂತರ ಅವರು ಒಪ್ಪಿಗೆ ಕೊಟ್ಟರೆ ರಾಜ್ಯದಲ್ಲಿ ಈ ಯೋಜನೆ ಹೊಸ ಮೈಲಿಗಲ್ಲು ಆಗಲಿದೆ ಎಂದರು.

ಈ ಯೋಜನೆಯಲ್ಲಿ ಮೂರು ಟನಲ್ ಬರಲಿದ್ದು ಮಾರನಹಳ್ಳಿಯಿಂದ ಗೂಂಡ್ಯವರೆಗು ಸುಮಾರು ೩೦ ಕಿಲೋ ಮೀಟರ್ ಹೆದ್ದಾರಿ ಮಾರ್ಗದಲ್ಲಿ ೩.೫ ಕಿಮೀ ಸುರಂಗಮಾರ್ಗ ೧೦ ಕಿಮೀ ಫ್ಲೈ ಓವರ್ ನಿರ್ಮಿಸಲಾಗುತ್ತದೆ. ಈಗಿರುವ ರಸ್ತೆಗೆ ಪರ್ಯಾಯ ಮಾರ್ಗವಾಗಿ ಯಶಸ್ವಿ ಯೋಜನೆ ಕೂಡ ಆಗಲಿದೆ ಎಂದರು.

ಈ ಯೋಜನೆಗೆ ಅರಣ್ಯ ಇಲಾಖೆಯಿಂದ ಅನುಮತಿ ಸಿಗಬೇಕಿದೆ ಒಂದು ಮಾರ್ಗದಲ್ಲಿ ಟನಲ್ ನಿರ್ಮಾಣ ಮಾಡಲಾಗುವುದು ಇದರಿಂದ ಮಳೆಗಾಲದಲ್ಲಿ ಹೆಚ್ಚು ಅನುಕೂಲವಾಗಲಿದೆ. ಅಪಘಾತ ತಡೆಯುವ ನಿಟ್ಟಿನಲ್ಲಿ ಮತ್ತು ಸಮಯದ ಉಳಿತಾಯ ಆಗಲಿದೆ ಎಂದು ಹೇಳಿದರು.

ಪರಿಸರಕ್ಕೆ ಯಾವುದೇ ಹಾನಿ ಯಾಗದಂತೆ ಈ ಕಾಮಗಾರಿಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ. ಕೇಂದ್ರ ಸಚಿವರು ಒಪ್ಪಿಗೆ ನೀಡಿದಲ್ಲಿ ಆದಷ್ಟು ಶೀಘ್ರವಾಗಿ ರಾಜ್ಯ ಸಚಿವರು ಗಳೊಂದಿಗೆ ಚರ್ಚೆ ನಡೆಸಿ ಅಗತ್ಯ ತೀರ್ಮಾನ ಕೈಗೊಳ್ಳಲಿದ್ದೇವೆ .

ನಾನು ಸಹ ಅರಣ್ಯ ಸಚಿವ ನಾಗಿ ಕೆಲಸ ಮಾಡಿದ್ದು ಅರಣ್ಯವನ್ನು ಉಳಿಸಿ ಯೋಜನೆಯನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡಲಿದ್ದೇವೆ ಎಂದು ಸಚಿವರು ತಿಳಿಸಿದರು.

ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ರಮೇಂದ್ರ ಅವರು ಮಾತನಾಡಿ ಯೋಜನೆಯ ಕುರಿತು ಪ್ರಾಥಮಿಕವಾಗಿ ರೂಪು ರೇಷೆಗಳನ್ನು ಈಗಾಗಲೇ ಸಿದ್ಧಪಡಿಸಿದ್ದು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಅಂತಿಮ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗುವುದು ಎಂದು ಹೇಳಿದರು.

ಈ ಯೋಜನೆ ಸಾಕಾರ ಗೊಂಡಲ್ಲಿ ರಾಜ್ಯದಲ್ಲಿಯೇ ಪ್ರಥಮ ಸುರಂಗ ಮಾರ್ಗ ಇದಾಗಲಿದೆ ಈಗಾಗಲೇ ದೇಶದ ಕಾಶ್ಮೀರ ಹಾಗೂ ಇತರೆ ರಾಜ್ಯಗಳಲ್ಲಿ ಅರಣ್ಯ ಪ್ರದೇಶದಲ್ಲಿ ಈ ರೀತಿಯ ಸುರಂಗ ಮಾರ್ಗಗಳನ್ನು ಮಾಡಲಾಗಿದೆ. ರೈಲ್ವೆ ಇಲಾಖೆಯಲ್ಲಿ ಈ ರೀತಿಯ ಸುರಂಗಮಾರ್ಗ ಕಾಣುತ್ತಿದ್ದು ಇದೀಗ ರಾಜ್ಯದಲ್ಲಿ ರಸ್ತೆಯ ಮಾರ್ಗದಲ್ಲಿ ಇದು ಮೊದಲ ಯೋಜನೆಯಾಗಿದೆ ಎಂದು ವಿವರಿಸಿದರು.

ಈ ವೇಳೆ ಶಾಸಕರಾದ ಸಿಮಿಂಟ್ ಮಂಜು, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಸತ್ಯನಾರಾಯಣ, ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಇಂಜಿನಿಯರ್ ರಮೇಂದ್ರ, ಎಸ್ ಹೆಚ್.ಡಿ.ಪಿ ಮುಖ್ಯ ಯೋಜನಾಧಿಕಾರ ಶಿವ ಯೋಗಿ ಹಿರೇಮಠ್ ಉಪ ವಿಭಾಗಾಧಿಕಾರಿ ಅನ್ಮೋಲ್ ಜೈನ್, ಮುರುಳಿ ಮೋಹನ್, ಮಹಾಂತಪ್ಪ ಮತ್ತಿತರರು ಹಾಜರಿದ್ದರು.

ಹೆದ್ದಾರಿ ಕುಸಿತ : ಸ್ಥಳ ಪರಿಶೀಲನೆ
ದೋಣಿಗಾಲ್ ಬಳಿ ಕಳೆದ ಹಲವು ವರ್ಷಗಳಿಂದಲೂ ಸಮಸ್ಯಾತ್ಮಕವಾಗಿರುವ ಸ್ಥಳ ಪರಿಶೀಲಿಸಿದ ಸಚಿವರು ಆದಷ್ಟು ಶೀಘ್ರವಾಗಿ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುವಂತೆ ಅಧಿಕಾರಿಗಳಿಗೆ ಹೇಳಿದರು. ಇದೇ ವೇಳೆ ರಸ್ತೆ ಕಾಮಗಾರಿಯಿಂದ ಭೂ ಕುಸಿತ ಉಂಟಾಗಿ ಜಮೀನು ಕಳೆದುಕೊಂಡ ರೈತರ ಭೂಮಾಲಿಕರ ಅಹವಾಲು ಆಲಿಸಿದ ಸಚಿವರು ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದ ಅವರು ಸಕಲೇಶಪುರ ದಿಂದ ಗುಂಡ್ಯವರಗೆ ರಸ್ತೆ ಕಾಮಗಾರಿ ಪರಿಶೀಲಿಸಿದ ಅವರು ಕಾಲಮಿತಿಯೊಳಗೆ ಗುಣ ಮಟ್ಟದೊಂದಿಗೆ ಕಾಮಗಾರಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

೫ ಗ್ಯಾರಂಟಿ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧ
ಅನ್ನಭಾಗ್ಯ ಅಕ್ಕಿ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿಗಳು ಪ್ರಯತ್ನ ಮುಂದುವರಿಸಿದ್ದಾರೆ. ಯಾವ ರೀತಿ ಪರಿಹಾರ ಒದಗಲಿದೆ ಎಂದು ಕಾದು ನೋಡೋಣ ಎಂದು ಸಚಿವ ಸತೀಶ್ ಹೇಳಿದರು . ಚುನಾವಣಾ ಪೂರ್ವ ಕಾಂಗ್ರೆಸ್ ಪಕ್ಷ ನೀಡಿದ ಎಲ್ಲಾ ೫ ಗ್ಯಾರಂಟಿಗಳನ್ನು ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತರುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ. ಗ್ಯಾರಂಟಿ ಜಾರಿ ವಿಷಯದಲ್ಲಿ ಗೊಂದಲವಿಲ್ಲ ಕೇವಲ ವಿಳಂಬವಾಗುತ್ತದೆ ಎಂದು ಸ್ಪಷ್ಟಪಡಿಸಿದ ಸಚಿವರು ಕೇಂದ್ರ ಸರ್ಕಾರ ಅಕ್ಕಿ ನೀಡುವ ವಿಚಾರದಲ್ಲಿ ತಡೆ ಮಾಡುತ್ತಿರುವುದು ನಿಜ ರಾಜಕೀಯದಲ್ಲಿ ಈ ರೀತಿಯ ವಿರೋಧ ಮಾಡುವುದು ಸಹಜವಾಗಿದ್ದು ಜನರಿಗೆ ೫ ಗ್ಯಾರಂಟಿಗಳನ್ನು ಕೊಡುವಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಈ ಹಿಂದೆ ಭರವಸೆ ನೀಡಿದಂತೆ ರಾಜ್ಯಕ್ಕೆ ಅಗತ್ಯ ಪ್ರಮಾಣದ ಅಕ್ಕಿಯನ್ನು ವಿತರಿಸಬಹುದಾಗಿತ್ತು ಆದರೆ ರಾಜಕೀಯ ಮಾಡುತಿದೆ ಪರ್ಯಾಯ ದಾರಿ ಕಂಡುಕೊಳ್ಳುತ್ತೇವೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಮಾರ್ಚ್ ವೇಳೆಗೆ ಹೆದ್ದಾರಿ ೭೫ ಪೂರ್ಣ
ಕಳೆದ ಏಳು ವರ್ಷಗಳಿಂದ ಕುಂಟ್ಟುತ್ತಾ ಸಾಗಿರುವ ರಾಷ್ಟ್ರೀಯ ಹೆದ್ದಾರಿ ೭೫ ಕಾಮಗಾರಿ ೨೦೨೪ ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳೆ ವಿಶ್ವಾಸ ವ್ಯಕ್ತಪಡಿಸಿದರು.

ತಾಂತ್ರಿಕ ಕಾರಣಗಳಿಂದ ಕಳೆದ ಏಳು ವರ್ಷಗಳಿಂದ ಹೆದ್ದಾರಿ ಕಾಮಗಾರಿ ವಿಳಂಬವಾಗುತ್ತಿದೆ. ಈ ಯೋಜನೆಯನ್ನು ಆದಷ್ಟು ಶೀಘ್ರವಾಗಿ ಪೂರ್ಣ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈಗಾಗಲೇ ಹಾಸನದಿಂದ- ಸಕಲೇಶಪುರ ಬೈಪಾಸ್ ವರೆಗೂ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ನವೆಂಬರ್ ಅಂತ್ಯದ ವೇಳೆಗೆ ಒಂದು ಬದಿಯ ಹೆದ್ದಾರಿ ಸಂಪೂರ್ಣ ಕಾಮಗಾರಿ ಸಾಕಾರಗೊಳ್ಳಲಿದೆ ಎಂದು ಗುತ್ತಿಗೆದಾರರು ಭರವಸೆ ನೀಡಿದ್ದಾರೆ ಎಂದರು.

ಮುಂದಿನ ಮಾರ್ಚ್ ೨೦೨೪ರ ವೇಳೆಗೆ ಹಾಸನ- ಸಕಲೇಶಪುರ ಮಾರ್ಗದ ಎರಡು ಬದಿಯ ಹೆದ್ದಾರಿ ರಸ್ತೆಯ ಕಾಮಗಾರಿ ಪೂರ್ಣ ಮಾಡುವ ಕುರಿತು ಗುತ್ತಿಗೆದಾರರು ಭರವಸೆ ನೀಡಿದ್ದಾರೆ.

ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ ಇದಾಗಿದ್ದು ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಈ ಮಾರ್ಗದ ಹೆದ್ದಾರಿ ಕಾಮಗಾರಿ ಕೈಗೊಳ್ಳುವ ವೇಳೆ ಹೆದ್ದಾರಿ ಬಂದ್ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಕೇವಲ ಒಂದು ಬದಿ ರಸ್ತೆ ಬಂದ್ ಮಾಡುವ ಮೂಲಕ ಮತ್ತೊಂದು ಬದಿಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು