News Karnataka Kannada
Sunday, April 21 2024
Cricket
ಮಂಗಳೂರು

ಭಾರೀ ಮಳೆ: ಮನೆ ಗೋಡೆ ಮೇಲೆ ಕುಸಿದು ಬಿದ್ದ ಕಾಂಪೌಂಡ್

Mangaluru: Compound wall collapses, bikes damaged
Photo Credit : News Kannada

ಬಂಟ್ವಾಳ: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿಟ್ಲ ಸಮೀಪದ ಚಂದಳಿಕೆ ಎಂಬಲ್ಲಿ ಕಾಂಪೌಂಡ್ ಒಂದು ಮನೆ ಗೋಡೆ ಮೇಲೆ ಕುಸಿದು ಬಿದ್ದು, ಅಪಾರ ನಷ್ಟ ಉಂಟಾದ ಘಟನೆ ನಡೆದಿದೆ.

ಚಂದಳಿಕೆ ನಿವಾಸಿ ಕೃಷ್ಣಪ್ಪ ಮಡಿವಾಳ ರವರ ಮನೆಗೆ ಕಾಂಪೌಂಡ್ ಕುಸಿದು ಬಿದ್ದಿದ್ದು, ಕೂಡಲೇ ಅವರು ವಿಟ್ಲ ಪಟ್ಟಣ ಪಂಚಾಯತ್ ವಿಕೋಪ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿದ್ದು, ಪ್ರಾಕೃತಿಕ ವಿಕೋಪ ಸಹಾಯವಾಣಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದಾರೆ. ಸ್ಥಳಕ್ಕೆ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅಶ್ರಫ್ ವಿ.ಕೆ. ಹಾಗೂ ಪಟ್ಟಣ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಸಹಾಯವಾಣಿಗೆ ಕರೆ ಮಾಡಲು ಮನವಿ:

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಯಾವುದೇ ಅಪಾಯ ಸಂಭವಿಸಿದ ಸಂದರ್ಭದಲ್ಲಿ ಕೂಡಲೇ ವಿಟ್ಲ ಪಟ್ಟಣ ಪಂಚಾಯತ್ ಪ್ರಾಕೃತಿಕ ವಿಕೋಪ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 08255239220 ಯನ್ನು ಸಂಪರ್ಕಿಸುವಂತೆ ಪಟ್ಟಣ ಪಂಚಾಯತ್ ಪ್ರಕಟಣೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು