News Karnataka Kannada
Saturday, April 13 2024
Cricket
ಬೆಂಗಳೂರು ನಗರ

ವಿದ್ಯಾರ್ಥಿನಿ ಆತ್ಮಹತ್ಯೆ ಹಿಂದಿದೆ ಲವ್‌ ಟಾರ್ಚರ್‌ : ಶಿಕ್ಷಕರ ವಿರುದ್ಧ ಆರೋಪ ಇಲ್ಲಿದೆ ನೋಡಿ

Man arrested for assaulting woman in Goa resort
Photo Credit : IANS

ಬೆಂಗಳೂರು: ಇಬ್ಬರು ಶಿಕ್ಷಕರು 16 ವರ್ಷದ ವಿದ್ಯಾರ್ಥಿನಿಯನ್ನು ಚಿತ್ರಹಿಂಸೆ ನೀಡಿ ಆತ್ಮಹತ್ಯೆಗೆ ಪ್ರೇರಣೆ ನೀಡಿರುವ ಬಗ್ಗೆ ದೂರು ದಾಖಲಾಗಿದೆ. ಮೃತ ಬಾಲಕಿ ಮಿಲೇನಿಯಂ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಾರ್ವತಿಪುರ ನಿವಾಸಿ. ಜೂನ್ 20 ರಂದು ಶಾಲೆಯಿಂದ ಮನೆಗೆ ಬಂದ ನಂತರ ಬಾಲಕಿ ಖಿನ್ನತೆಗೆ ಒಳಗಾಗಿದ್ದಳು.

ಇದನ್ನು ಆಕೆಯ ಪೋಷಕರು ಗಮನಿಸಿದ್ದರೂ ಕೂಡ ನಿರ್ಲಕ್ಷಿಸಿದ್ದರು. ಬಾಲಕಿ ಊಟ ಮಾಡಿ ನಂತರ ತನ್ನ ಕೋಣೆಗೆ ಹೋದವಳು ಹೊರ ಬಂದಿರಲಿಲ್ಲ. ಬಳಿಕ ಬಾಗಿಲು ಒಡೆದು ನೋಡಿದಾಗ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಕೂಡಲೇ ಆಕೆಯನ್ನು ನರ್ಸಿಂಗ್ ಹೋಂಗೆ ಕರೆದೊಯ್ದರೂ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದರು.
ನಳಿನಾ ಮತ್ತು ಕಮರ್ ತಾಜ್ ಎಂಬ ಇಬ್ಬರು ಶಿಕ್ಷಕರು ಬಾಲಕಿಗೆ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರೂ ಶಿಕ್ಷಕರು ಬಾಲಕಿಯನ್ನು ಕ್ಷುಲ್ಲಕ ಕಾರಣಗಳಿಗಾಗಿ ಬಾಲಕಿಯನ್ನು ನಿಂದಿಸುತ್ತಿದ್ದರು. ಆತ್ಮಹತ್ಯೆಗೆ ಕೆಲವು ದಿನಗಳ ಮೊದಲು ವಿದ್ಯಾರ್ಥಿನಿಯರ ಮುಂದೆ ತರಗತಿಯಲ್ಲಿ 100 ಸಿಟ್-ಅಪ್‌ ಮಾಡುವಂತೆ ಆಕೆಯನ್ನು ಹಿಂಸಿಸಲಾಗಿತ್ತು. ಅವಳ ಮುಖ ನೋಡಬಾರದೆಂದು ಗದರಿಸಿ ಕೊನೆಯ ಬೆಂಚಿನಲ್ಲಿ ಕೂರುವಂತೆ ಶಿಕ್ಷಕಿ ತಿಳಿಸಿದ್ದರು. ಆಕೆ ಆತ್ಮಹತ್ಯೆ ಮಾಡಿಕೊಂಡ ದಿನ ಸಾರಾಳನ್ನು ಇಬ್ಬರು ಶಿಕ್ಷಕರು ಪ್ರತ್ಯೇಕ ಕೋಣೆಗೆ ಕರೆದೊಯ್ದಿದ್ದರು. ಆಕೆ ಅಲ್ಲಿಂದ ಹಿಂದಿರುಗುವ ವೇಳೆ ವಿದ್ಯಾರ್ಥಿಗಳು ಆಕೆ ಕಣ್ಣೀರು ಹಾಕುತ್ತಿರುವುದನ್ನು ಗಮನಿಸಿದ್ದಾರೆ. ಅಲ್ಲದೆ ಶಿಕ್ಷಕ ಕಮರ್ ತಾಜ್ ಅವರ ಮಗ ಹಮೀನ್ ಎಂಬಾತನಿಂದ ಮೃತ ವಿದ್ಯಾರ್ಥಿನಿ ಸಾರಾಗೆ ಕಿರುಕುಳ ಅಲ್ಲಿ ಕಿರಿಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಹಮೀನ್ ಮೃತ ಬಾಲಕಿಯನ್ನು ಪ್ರೇಮಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ಆಕೆಯನ್ನು ಪ್ರೀತಿಸುತ್ತೇನೆ ಮತ್ತು ಮದುವೆಯಾಗುವುದಾಗಿ ತನ್ನ ಸ್ನೇಹಿತರಿಗೆಲ್ಲ ಹೇಳಿದ್ದ ಎನ್ನಲಾಗಿದೆ. ಅಲ್ಲದೆ ತನ್ನ ಪ್ರೇಮನಿವೇದನೆಯನ್ನು ನಿರಾಕರಿಸಿದರೆ ತಕ್ಕ ಪಾಠ ಕಲಿಸುವುದಾಗಿಯೂ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಇದೇ ಕಾರಣದಿಂದ ಬಾಲಕಿ ತನಗೆ ಬದುಕಲು ಇಷ್ಟವಿಲ್ಲ, ಸಾಯಬೇಕು ಎಂದು ಸ್ನೇಹಿತರ ಬಳಿ ಹೇಳಿದ್ದಳು ಎಂದು ತಿಳಿದುಬಂದಿದೆ. ಈ ವಿಷಯಗಳನ್ನು ಪೊಲೀಸರು ದೂರಿನಲ್ಲಿ ದಾಖಲಿಸಿದ್ದಾರೆ.

ದೂರು ನೀಡಿದ ನಂತರ ಶಿಕ್ಷಕ ಕಮರ್ ತಾಜ್ ನಾಪತ್ತೆಯಾಗಿದ್ದಾರೆ. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಶಿಕ್ಷಕರನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು