News Karnataka Kannada
Monday, April 22 2024
Cricket
ಬೆಂಗಳೂರು ನಗರ

ಕುಡಿದ ಮತ್ತಿನಲ್ಲಿ ತಂದೆ ತಾಯಿಯನ್ನೆ ಕೊಂದ ಪುತ್ರ

Drunk son kills parents
Photo Credit : News Kannada

ಬೆಂಗಳೂರು: ತಂದೆ ತಾಯಿಯರನ್ನು ದೇವರೆಂದು ಪೂಜಿಸುವವರು ಒಂದು ಕಡೆಯಾದರೆ ತಂದೆ ತಾಯಿಗಳನ್ನೆ ಇಳಿವಯಸ್ಸಿನಲ್ಲಿ ತಂದೆ ತಾಯಿಗಳನ್ನು ಹಿಂಸಿಸುವ, ಕೊಲೆ ಮಾಡುವ ಪಾಪಿಗಳು ನಮ್ಮ ನಡುವೆ ಇದ್ದಾರೆ. ಅದೇ ರೀತಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಹೆತ್ತ ತಂದೆ, ತಾಯಿಯನ್ನು ರಾಡ್​ನಿಂದ ಹೊಡೆದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಮಂಗಳವಾರ ನಡೆದಿದೆ.

ತನ್ನ ಪೋಷಕರನ್ನು ಹತ್ಯೆ ಮಾಡಿದ ಪಾಪಿ ಪುತ್ರನನ್ನು 27 ವರ್ಷದ ಶರತ್ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಆರೋಪಿ ಶರತ್ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆದಿದೆ.

ಮೃತ ಪೋಷಕರನ್ನು ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾಸ್ಕರ್(64) ಮತ್ತು ಕೇಂದ್ರ ಸರ್ಕಾರಿ ನಿವೃತ್ತ ಉದ್ಯೋಗಿ ಶಾಂತಾ(60) ಎಂದು ಗುರುತಿಸಲಾಗಿದೆ.

ಪೋಲೀಸರ ಪ್ರಕಾರ, ಶರತ್ ಕುಡಿದ ಅಮಲಿನಲ್ಲಿ ಕಬ್ಬಿಣದ ರಾಡ್‌ನಿಂದ ತಂದೆ, ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಭಾಸ್ಕರ್ ಹಾಗೂ ಅವರ ಪತ್ನಿ ಶಾಂತಾ ಅವರು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.

ಶರತ್ ಮಾನಸಿಕವಾಗಿ ನೊಂದಿದ್ದು, ಪೋಷಕರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಮೃತ ದಂಪತಿ ಮಂಗಳೂರು ಮೂಲದವರಾಗಿದ್ದು, 20 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು. ಇಬ್ಬರಲ್ಲಿ ಹಿರಿಯ ಮಗ ಕೆಲಸಕ್ಕೆ ಹೋಗುತ್ತಿದ್ದರು. ಶಶಾಂಕ್ ಮನೆಯಲ್ಲಿಯೇ ಇರುತ್ತಿದ್ದನು. ಕೆಲಸವಿಲ್ಲದೇ ಮನೆಯಲ್ಲಿರುತ್ತಿದ್ದ ಶರತ್ ವರ್ತನೆ ಸೈಕೋ ರೀತಿಯಲ್ಲಿತ್ತು ಎಂದು ತಿಳಿದು ಬಂದಿದೆ.

ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಹಿರಿಯ ಮಗ ತಂದೆ-ತಾಯಿಗೆ ಕರೆ ಮಾಡಿದ್ದಾನೆ. ಯಾರೂ ಫೋನ್ ರಿಸೀವ್ ಮಾಡದಿದ್ದಾಗ ಪಕ್ಕದ್ಮನೆಯವರಿಗೆ ಕರೆ ಮಾಡಿ ಪೋಷಕರ ಬಗ್ಗೆ ವಿಚಾರಿಸಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು