Bengaluru 27°C
Ad

ಇಂದು ಈ ರಾಶಿಯವರು ವಿರೋಧಿಗಳ ಸಂಚಿಗೆ ಬಲಿಯಾಗುವ ಸಾಧ್ಯತೆ ಇದೆ

Horoscope

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಜ್ಯೇಷ್ಠ, ಯೋಗ: ಶಿವ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:30ರ ವರೆಗೆ, ಯಮಘಂಡ ಕಾಲ 15:42ರಿಂದ 17:19ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:41 ರಿಂದ 09:17ರ ವರೆಗೆ.

ಇಂದಿನ (ಮೇ​​​​​ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ನೋಡುವುದಾದರೇ,
ಸಿಂಹ ರಾಶಿ :ನಿಮ್ಮ ಮಾತಿನಿಂದ ಜನರು ಪ್ರಭಾವಿತರಾಗಬಹುದು. ನಿಮಗೆ ಆದಾಯದ ಹೊಸ ಮಾರ್ಗಗಳು ಕಂಡುಬರಬಹುದು. ಈ ಸಮಯದಲ್ಲಿ ದೊಡ್ಡ ಅವಕಾಶದ ಹುಡುಕಾಟವು ಪೂರ್ಣಗೊಳ್ಳುತ್ತದೆ. ಆರಂಭದಲ್ಲಿ, ಕೆಲವು ಕೆಲಸಗಳನ್ನು ಯೋಚಿಸದೆ ಮಾಡಲಾಗುತ್ತದೆ ಮತ್ತು ಕೆಲವು ಪ್ರಜ್ಞಾಪೂರ್ವಕವಾಗಿ ಮುಂದುವರಿಯುತ್ತದೆ. ಇದು ಗುರಿಯ ಸಾಧನೆಗೆ ಅಥವಾ ಅನುಭವದ ಅನನ್ಯ ಕೊಡುಗೆಗೆ ಕಾರಣವಾಗುತ್ತದೆ. ಶತ್ರುಬಾದೆ ಇಂದೇ ಕಾಡಬಹುದು.

ಕನ್ಯಾ ರಾಶಿ :ಇಂದು ನಿಮ್ಮ ಆರ್ಥಿಕವಾದ ಏರಿಳಿತಗಳು ಹೆಚ್ಚಿರುವುದು. ಸಮಾಜದಲ್ಲಿ ನಿಮ್ಮ ಗೌರವವು ಹೆಚ್ಚಾಗುತ್ತದೆ. ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗಲಿದೆ. ದಾನ ಮಾಡುವ ಮನೋಭಾವವು ಹೆಚ್ಚಾಗುತ್ತದೆ. ನೀವು ಇಂದು ಮಂಗಲಕಾರ್ಯವನ್ನು ಯೋಜಿಸುವಿರಿ. ಕೆಲವು ನಕಾರಾತ್ಮಕ ಸುದ್ದಿಗಳಿಂದಾಗಿ ನಿಮ್ಮ ಮನಸ್ಸು ಚಿಂತಿತವಾಗಬಹುದು. ವಿರೋಧಿಗಳಿಂದ ದೂರವಿರಿ. ನಿಮ್ಮ‌ ಆಲೋಚನೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ.

ತುಲಾ ರಾಶಿ :ನಿಮ್ಮ ಮೇಲೆ ನಿಮಗೆ ಪೂರ್ಣಾವಾದ ನಂಬಿಕೆ ಇಡುವ ಮೂಲಕ ಯಶಸ್ಸು ಸಾಧಿಸಬಹುದು. ನಿಮ್ಮಲ್ಲಿರುವ ಗುಣಗಳು ಪ್ರಶಂಸೆಗೆ ಪಾತ್ರವಾಗಲಿದೆ. . ಕಿರಿಯರಿಂದ ಆಕಸ್ಮಿಕವಾಗಿ ಗೌರವಕ್ಕೆ ಪಾತ್ರರಾಗುವಿರಿ. ಎಂದೋ ಆದ ಬೇಸರವನ್ನು ಸ್ನೇಹಿತನ ಮುಂದೆ ಇಂದು ಪ್ರಕಟಿಸುವಿರಿ. ಅಸಹಜ ಮಾತುಗಳಿಗೆ ಸ್ಪಂದನೆ ಸಿಗದು. ವಿದ್ಯಾಭ್ಯಾಸದ ಹಿನ್ನಡೆಯು ನಿಮಗೆ ಗೊತ್ತಾಗದು.

ವೃಶ್ಚಿಕ ರಾಶಿ :ಇಂದು ನೀವು ಅನನೂಕುಲ ಸ್ಥಿತಿಯಿಂದ ಹೊರ ಬರುವಿರಿ. ವಿರೋಧಿಗಳ ಸಂಚಿಗೆ ಬಲಿಯಾಗುವ ಸಾಧ್ಯತೆ ಇದೆ. ಸರಿಯಾದ ದಾರಿಯಿಂದ ಮಾತ್ರ ಗೆಲುವು ಸಿಗಲಿದೆ. ಅದರಿಂದ ತೃಪ್ತಿಯೂ ಆಗಲಿದೆ. ಸರ್ಕಾರಿ ಕೆಲಸಗಳು ವಿಳಂಬವಾಗುವುದು. ನೆಚ್ಚಿನ ಕಲಾವಿದರ ಭೇಟಿಯಾಗಲಿದೆ. ಆಪ್ತರಿಂದ ಉಡುಗೊರೆ ಸಿಗಲಿದೆ. ಸ್ವಲ್ಪ ಆಲಸ್ಯವು ನಿಮ್ಮ ಕೆಲಸವನ್ನು ಹಿಂದಿಕ್ಕುವುದು. ಸ್ವತಂತ್ರವಾಗಿ ಆಲೋಚನೆಗಳನ್ನು ಬೆಳೆಸಿಕೊಳ್ಳುವುದು ಉತ್ತಮ. ನಿಮ್ಮವರ ಅಹಸಜ ವರ್ತನೆ ನಿಮಗೆ ಬೇಸರ ತರಿಸೀತು.

ಮೀನ ರಾಶಿ :ನೀವು ಪ್ರಮುಖ ವ್ಯಕ್ತಿಯ ಸಂಬಂಧವನ್ನು ಬೆಳೆಸುವಿರಿ. ಅದೇ ನಿಮ್ಮ ಸಂಪತ್ತಿನ ಮೂಲವಾಗುತ್ತದೆ. ಸೃಜನಶೀಲತಯಿಂದ ನಿಮ್ಮ ಮನಸ್ಸು ಅರಳುವುದು. ನಿಮ್ಮ ಪ್ರತಿಭೆಯಿಂದ ನೀವು ಅದ್ಭುತಗಳನ್ನು ಮಾಡಲು ಸಾಧ್ಯವಾಗುತ್ತದೆ. ಹಿರಿಯರ ಅನುಭವದಿಂದ ಪ್ರಯೋಜನ ಪಡೆಯುವಿರಿ. ಅನಗತ್ಯ ವಾದಗಳನ್ನು ಮಾಡಿ, ಕುಟುಂಬದ ಸದಸ್ಯರನ್ನು ನೋಯಿಸುವಿರಿ. ಸೋಮಾರಿತನದಿಂದ ಸಮಯವು ವ್ಯರ್ಥವಾಗಲಿದೆ.

Ad
Ad
Nk Channel Final 21 09 2023
Ad