News Karnataka Kannada
Friday, April 12 2024
Cricket
ಹಾಸನ

ಪ್ರೀತಂಗೌಡ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ದೂರು

Complaint filed against Preetham Gowda on charges of amassing disproportionate assets
Photo Credit : News Kannada

ಹಾಸನ: ಹಾಸನ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ ಹಾಸನ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿಯನ್ನು ಮಾಡುವ ಮೂಲ ಉತ್ತಮ ಹೆಸರು ಪಡೆದಿದ್ರೆ ಆದ್ರೆ ಇದೀಗಾ ಪ್ರೀತಂಗೌಡ ವಿರುದ್ಧ ಭಾರಿ ಪ್ರಮಾಣದ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಹಾಸನದ ವಕಿಲರಾದ ಸಂದೀಪ್ ಬಿ.ಪಿ ನ್ಯಾಯಲಯದಲ್ಲಿ ದೂರು ದಾಖಲಿಸಿದ್ದಾರೆ.

ಮಾಜಿ ಶಾಸಕ ಪ್ರೀತಂ ಗೌಡ ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ೫ ವರ್ಷದ ಹಿಂದೆ ಶಾಸಕರಾಗಿ ಆಯ್ಕೆಯಾಗಿ ಸಾಕಷ್ಟು ಅಭಿವೃದ್ದಿಯನ್ನು ಮಾಡಿದರು. ಜೆಡಿಎಸ್ ಭದ್ರ ಕೋಟೆಯನ್ನು ಭೇದಿಸಿ ಜನರಿಗೆ ಏನು ಬೇಕಿತ್ತೋ ಅದನ್ನು ಮಾಡಿಕೋಡುವುದರ ಮೂಲಕ ಜನರಲ್ಲಿ ಒಂದು ವಿಶ್ವಾಸವನ್ನು ಮೂಡಿಸಿ ೨೦೧೮ರ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿ ಶಾಸಕರಾಗಿ ಆಯ್ಕೆಯಾದರು.

ತದನಂತರ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ತಮ್ಮ ಎರಡನೇ ಮುಖವನ್ನು ತೋರಿಸಲು ಪ್ರಾರಂಭಿಸಿದ ಪ್ರೀತಂಗೌಡ, ಹಾಸನದ ಜನರಿಗೆ ತೃಪ್ತಿಯಾಗುವಷ್ಟು ಕ್ಷೇತ್ರದಲ್ಲಿ ಕೆಲಸವನ್ನು ಮಾಡಿ ಜನರ ಮೇಚ್ಚುಗೆಗೆ ಪಾತ್ರರಾದರು.

ಆದರೆ ೨೦೨೩ರ ಚುನಾವಣೆಯಲ್ಲಿ ಪ್ರೀತಂ ಗೌಡರ ಅತೀಯಾದ ನಂಬಿಕೆ ಹಾಗೇ ತಮ್ಮ ಮಾತಿನಿಂದ ಶಾಸಕರ ಸ್ಥಾನದಿಂದ ಕೆಳಗಿಳಿಯೋ ಸ್ಥಿತಿ ನಿರ್ಮಾಣವಾಯಿತು. ಇದರ ಬೆನ್ನಲೆ ಅವರ ವಿರುದ್ದ ಅಕ್ರಮ ಆಸ್ತಿ ಆರೋಪವು ಬಲವಾಗಿ ಕೇಳಿಬಂದಿದ್ದು, ಈದೀಗ ಆರೋಪವು ಅಧಿಕೃತವಾಗಿ ನ್ಯಾಯಲಯದ ಮೇಟ್ಟಿಲೇರಿದೆ. ಆಧಾಯಕಿಂತ ಅಧಿಕ ಆಸ್ತಿಯನ್ನು ಮಾಡಿದ್ದಾರೆ ಎಂದು ಭ್ರಷ್ಟಚಾರ ತಡೆ ಕಾಯ್ದೆ ಸೇಕ್ಷನ್ ೧೩(೧) ಇ , ೧೩(೨) ಮತ್ತು ಶಿಕ್ಷಾರ್ಹ ಅಪಾರಾಧ ಕಾಯ್ದೆ ಸೇಕ್ಷನ್ ೧೦೯ ಐ ಪಿ ಸಿ ಕಾಯ್ದೆ ಪ್ರಕಾರ ಅವರ ವಿರುದ್ಧ ೧೪ ಜೂನ್ ೨೦೨೩ ರಂದು ದೂರು ದಾಖಲಾಗಿದ್ದು, ಮಾಜಿ ಶಾಸಕ ಪ್ರೀತಂಗೌಡ ಸೇರಿದಂತೆ ಪ್ರೀತಂಗೌಡ ಪತ್ನಿ, ಸಂಬಂಧಿಕರು ಹಾಗೂ ಆಪ್ತರು ಸೇರಿದಂತೆ ಒಟ್ಟು ೬ ಮಂದಿಯ ಹೆಸರುಗಳು ಉಲ್ಲೇಖಿಸಲಾಗಿದೆ.

ಈ ವಿಚಾರ ಜುಲೈ ೨೫ ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಬೆಂಗಳೂರು ಕೋರ್ಟ್ ಆದೇಶ ನೀಡಿದ್ದು, ನ್ಯಾಯಲಯವು ಪ್ರೀತಂಗೌಡ ಅಕ್ರಮ ಆಸ್ತಿ ಗಳಿಕೆ ತನಿಖೆಯ ಜವಬ್ದಾರಿಯನ್ನು ಹಾಸನದ ಲೋಕಾಯುಕ್ತರಿಗೆ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು