Bengaluru 26°C
Ad

ಮೊದಲ ಬಾರಿ ನೈಟ್ ವಿಷನ್ ಗಾಗಲ್ಸ್ ಬಳಸಿ ವಿಮಾನ ಲ್ಯಾಂಡ್ ಮಾಡಿದ ಐಎಎಫ್

Night

ನವದೆಹಲಿ: ಭಾರತೀಯ ವಾಯುಪಡೆ ಮೊದಲ ಬಾರಿಗೆ ಪೂರ್ವ ವಲಯದ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್‍ನಲ್ಲಿ ಎನ್‍ವಿಜಿ ಬಳಸಿ (ರಾತ್ರಿ ದೃಷ್ಟಿ ಕನ್ನಡಕ) ವಿಮಾನವನ್ನು ಯಶಸ್ವಿಯಾಗಿ ಇಳಿಸಿದೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ವಾಯುಪಡೆ, ಐಎಎಫ್ ಸಿ-130ಜೆ ವಿಮಾನವನ್ನು ಪೂರ್ವ ವಲಯದಲ್ಲಿರುವ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್‍ನಲ್ಲಿ ನೈಟ್ ವಿಷನ್ ಗಾಗಲ್ಸ್ ಸಹಾಯದಿಂದ ಲ್ಯಾಂಡ್ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದೆ.

ಅಲ್ಲದೇ ಎಕ್ಸ್‌ನಲ್ಲಿ ವಿಮಾನ ಲ್ಯಾಂಡಿಂಗ್ ಆಗುವ ವೀಡಿಯೋವನ್ನು ಸಹ ಹಂಚಿಕೊಳ್ಳಲಾಗಿದ್ದು, ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿರುವುದನ್ನು ಗಮನಿಸಬಹುದಾಗಿದೆ. ಇದರೊಂದಿಗೆ ಕಿಟಕಿಯಿಂದ ಸಹ ಎನ್‍ವಿಜಿ ಬಳಸಿ ಒಂದು ದೃಶ್ಯವನ್ನು ಸೆರೆ ಹಿಡಿದು ಹಂಚಿಕೊಳ್ಳಲಾಗಿದೆ.

ಎನ್‍ವಿಜಿ ತಂತ್ರಜ್ಞಾನ ಬಳಸಿಕೊಂಡು, ವಾಯುಪಡೆ ಈಗ ಕಡಿಮೆ ಬೆಳಕಿರುವ ಸಮಯದಲ್ಲೂ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಕಾರ್ಯಾಚರಣೆಗಳನ್ನು ನಡೆಸಬಹುದು. ಇದು ರಾತ್ರಿ ವೇಳೆಯ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಸಹಕಾರಿಯಾಗಲಿದೆ.

https://x.com/IAF_MCC/status/1793496057726566761

Ad
Ad
Nk Channel Final 21 09 2023
Ad