Bengaluru 23°C
Ad

ಶಿವಮೊಗ್ಗ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರ ದುರ್ಮರಣ

ಕೃಷಿಯ ಕೆಲಸ ಮಾಡುತ್ತಿದ್ದ ವೇಳೆ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ದುರ್ಮರಣ ಹೊಂದಿರುವಂತಹ ಘಟನೆ ಶಿವಮೊಗ್ಗ ತಾಲೂಕಿನ ಚನ್ನಹಳ್ಳಿ ಗ್ರಾಮದ ಹೊಲದಲ್ಲಿ ನಡೆದಿದೆ.

ಶಿವಮೊಗ್ಗ:  ಕೃಷಿಯ ಕೆಲಸ ಮಾಡುತ್ತಿದ್ದ ವೇಳೆ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ನೀರುಪಾಲಾದ ಘಟನೆ ಶಿವಮೊಗ್ಗ ತಾಲೂಕಿನ ಚನ್ನಹಳ್ಳಿ ಗ್ರಾಮದ ಹೊಲದಲ್ಲಿ ನಡೆದಿದೆ.

ಅಭಯ್​(16), ಮಾಲತೇಶ್(27) ಮೃತ ದುರ್ದೈವಿಗಳು.

ಹೊಲದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದ್ದು,  ಈ ವೇಳೆ ಬಾಲಕ ಅಭಯ ಕೂಡ  ಪೋಷಕರ ಹೊಲದಲ್ಲಿ ಕೃಷಿ ಕೆಲಸಕ್ಕೆ ಸಹಾಯ ಮಾಡಲು ತೆರಳಿದ್ದನು. ಈ ವೇಳೆ ಭೂಮಿಯನ್ನು ಬಿತ್ತನೆ ಹದಗೊಳಿಸುತ್ತಿದ್ದರು. ಅಭಯಗೆ ಬಾಯಾರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಆತ ಕೃಷಿ ಹೊಂಡದಲ್ಲಿರುವ ನೀರು ಕುಡಿಯಲು ಮುಂದಾಗಿದ್ದಾನೆ. ಅಭಯ ಕೃಷಿ ಹೊಂಡದಲ್ಲಿ ಕಾಲುಜಾರಿ ಬಿದ್ದು ನೀರು ಪಾಲಾಗಿದ್ದಾನೆ. ಇದನ್ನೂ ದೂರದಲ್ಲಿ ಟ್ರ್ಯಾಕ್ಟರ್ ಮೂಲಕ ಭೂಮಿಯನ್ನು ಹದಗೊಳಿಸುತ್ತಿದ್ದ ಮಾಲತೇಶ್ ಯುವಕನು ನೋಡಿದ್ದಾನೆ.

ಆತ ಕೂಡಲೇ ಕೃಷಿ ಹೊಂಡದ ಬಳಿ ದೌಡಾಯಿಸಿದ್ದಾನೆ. ಆತನ ಬಚಾವ್ ಮಾಡಲು ಹೋಗಿದ್ದ ಮಾಲತೇಶ್ ಕೂಡ ಕೃಷಿ ಹೊಂಡದಲ್ಲಿ ಬಿದ್ದಿದ್ದಾನೆ. ಇಬ್ಬರು ನೀರು ಪಾಲಾಗಿದ್ದಾರೆ.  ಇದನ್ನು ನೋಡಿದ ಅಕ್ಕಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿರುವ ಕೃಷಿಕರು ಅಲ್ಲಿಗೆ ದೌಡಾಯಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಇಬ್ಬರು ಮೃತಪಟ್ಟಿದ್ದರು.

ಇಬ್ಬರ ಸಾವು ನೋಡಿದ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರು ಇಬ್ಬರು ಪತ್ಯೇಕ ಕುಟುಂಬ. ಆದರೆ ಇಬ್ಬರು ಚನ್ನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ. ಬಾಲಕನ ಬಚಾವ್ ಮಾಡಲು ತೆರಳಿದ್ದ ಮಾಲತೇಶ್​ನ ಮದುವೆಯಾಗಿ ಕೇವಲ ಒಂದು ವರ್ಷ ಆಗಿದೆ. ಅಭಯನ ಜೀವ ಉಳಿಸಲು ಹೋಗಿ ಮಾಲತೇಶ್ ತನ್ನ ಜೀವ ಕಳೆದುಕೊಂಡಿದ್ದಾನೆ.

Ad
Ad
Nk Channel Final 21 09 2023
Ad