ಬೆಂಗಳೂರು: ಕೋವಿಡ್-19 ಲಸಿಕೆ ಪಡೆದ ಬೆಂಗಳೂರಿನ 103ರ ಹರೆಯದ ಜೆ. ಕಾಮೇಶ್ವರಿ ಅವರು ಲಸಿಕೆ ಪಡೆದ ದೇಶದ ಅತೀ ಹಿರಿಯ ನಾಗರಿಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವರು.
ಬನ್ನೇರುಘಟ್ಟದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಕುಟುಂಬ ಸಮೇತರಾಗಿ ಬಂದ ಅವರು ಲಸಿಕೆ ಪಡೆದುಕೊಂಡರು. ಅವರನ್ನು 30 ನಿಮಿಷಗಳ ಕಾಲ ಕಡ್ಡಾಯವಾಗಿ ನಿಗಾದಲ್ಲಿ ಕೂಡ ಇಡಲಾಯಿತು.
ಕಾಮೇಶ್ವರಿ ಅವರ ಮಗ ಪ್ರಸಾದ್ ರಾವ್(77) ಅವರು ಕೂಡ ಲಸಿಕೆ ಹಾಕಿಸಿಕೊಂಡರು.
ಆಸ್ಪತ್ರೆ ಅಧಿಕಾರಿಗಳು ಕಾಮೇಶ್ವರಿ ಅವರನ್ನು ಅಭಿನಂದಿಸಿದ್ದು, ಲಸಿಕೆಯು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎಂದರು.