ಮೊಬೈಲ್ನ್ನು ಬಳಸದಂತೆ ಕೈಯಿಂದ ಕಸಿದುಕೊಂಡದಕ್ಕೆ ಸ್ವಂತ ತಂದೆ ತಾಯಿ ಮತ್ತು ಸಹೋದರಿಯನ್ನು ಗುಂಡಿಕ್ಕಿ ಕೊಂದಿದ್ದು ವಾರಗಳ ಕಾಲ ಮೃತದೇಹಗಳ ಜತೆ ಬಾಲಕನೊಬ್ಬ ಕಾಲ ಕಳೆದಿರುವ ಘಟನೆ ಸಾವೊ ಪಾಲೊದಲ್ಲಿ ನಡೆದಿದೆ. ಈ ಸಂಬಂಧ ಸೋಮವಾರ ಬಾಲಕನೇ ಪೊಲೀಸರಿಗೆ ಕರೆ ಮಾಡಿ ತಪ್ಪೊಪ್ಪಿಕೊಂಡಿದ್ದಾನೆ.
ಮೊಬೈಲ್ಗಾಗಿ ಇಬ್ಬರು ಜಗಳವಾಡುತ್ತಿದ್ದನ್ನು ಕಂಡ ಪೋಷಕರು ಮೊಬೈಲ್ನ್ನು ಕಿತ್ತುಕೊಂಡಿದ್ದಕ್ಕೆ ಕೋಪಗೊಂಡ ಬಾಲಕ ಪೋಷಕರು ಹಾಗೂ ಸಹೋದರಿಯನ್ನು ಹತ್ಯೆ ಮಾಡಿದ್ದ. ಮುನ್ಸಿಪಲ್ ಪೊಲೀಸ್ ಆಗಿದ್ದ ತಂದೆಯ ಸರ್ವೀಸ್ ಗನ್ ಹಿಡಿದು ಮನಬಂದಂತೆ ಗುಂಡು ಹಾರಿಸಿದ್ದಾಗಿ ಆತನೇ ತಿಳಿಸಿದ್ದಾನೆ. ಸಹೋದರಿಯ ಮುಖಕ್ಕೂ ಗುಂಡು ಹಾರಿಸಿದ್ದಾನೆ, ಹಲವು ಗಂಟೆಗಳ ಬಳಿಕ ತಾಯಿ ಮನೆಗೆ ಬಂದಾಗ ಅದೇ ರಿವಾಲ್ವರ್ನಿಂದ ಆಕೆಯನ್ನೂ ಕೊಂದಿದ್ದಾನೆ.
ಆತ ಒಂದು ವಾರದವರೆಗೆ ರಕ್ತಸಿಕ್ತ ದೇಹಗಳ ಜತೆಗೆ ಮನೆಯಲ್ಲೇ ಇದ್ದ. ತಾಯಿಯ ಶವವನ್ನು ಚಾಕುವಿನಿಂದ ಇರಿದಿದ್ದಾನೆ. ಆತನನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ.
Ad