Bengaluru 22°C
Ad

ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್​ಗಳಿಗೆ ಬಾಂಬ್​ ಬೆದರಿಕೆ

ಶಾಲೆಗಳಿಗೆ ಮತ್ತು ವಿಮಾನ ನಿಲ್ದಾಣ ಬೆನ್ನಲ್ಲೇ ಇದೀಗ ಮತ್ತೊಮ್ಮೆ ನಗರದ ಫೈವ್ ಸ್ಟಾರ್ ಹೋಟೆಲ್​ಗಳಿಗೆ ಇ ಮೇಲ್‌ ಮೂಲಕ ಬಾಂಬ್​ ಬೆದರಿಕೆ ಹಾಕಲಾಗಿದೆ.

ಬೆಂಗಳೂರು : ಶಾಲೆಗಳಿಗೆ ಮತ್ತು ವಿಮಾನ ನಿಲ್ದಾಣ ಬೆನ್ನಲ್ಲೇ ಇದೀಗ ಮತ್ತೊಮ್ಮೆ ನಗರದ ಫೈವ್ ಸ್ಟಾರ್ ಹೋಟೆಲ್​ಗಳಿಗೆ ಇ ಮೇಲ್‌ ಮೂಲಕ ಬಾಂಬ್​ ಬೆದರಿಕೆ ಹಾಕಲಾಗಿದೆ.ಎಲೆಕ್ಟ್ರಾನಿಕ್ ಸಿಟಿ ಬಳಿಯ ಸ್ಟಾರ್​ ಹೋಟೆಲ್​ಗೆ ಬೆದರಿಕೆ ಸಂದೇಶ ಬಂದಿದ್ದು, ಮಧ್ಯರಾತ್ರಿ 2 ಗಂಟೆಗೆ ಬಾಂಬ್​ ಸ್ಫೋಟಿಸುವುದಾಗಿ ಉಲ್ಲೇಖಿಸಲಾಗಿದೆ.ಗುರುವಾರ ಬೆಳಗ್ಗೆ ಹೋಟೆಲ್ ಸಿಬ್ಬಂದಿ ಮೇಲ್ ಪರಿಶೀಲಿಸಿದಾಗ ಬೆದರಿಕೆ ಸಂದೇಶ ಬೆಳಕಿಗೆ ಬಂದಿದೆ. ತಕ್ಷಣವೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದ್ದು ಬಾಂಬ್ ಸ್ಕ್ವಾಡ್ ಸಹ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದೆ.

Ad
Ad
Nk Channel Final 21 09 2023
Ad