Bengaluru 26°C
Ad

ʻಮೋದಿಗೆ ಗೆಲುವು ಖಚಿತʼ : ಭವಿಷ್ಯ ನುಡಿದ ಇಯಾನ್‌ ಬ್ರೆಮ್ಮರ್‌

ದೇಶದಲ್ಲಿ ಈಗಾಗಲೇ ಐದು ಹಂತಗಳ ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು ಕೇವಲ ಇನ್ನೆರೆಡು ಹಂತಗಳ ಚುನಾವಣೆ ಬಾಕಿ ಉಳಿದಿದೆ.

ಅಮೇರಿಕಾ : ದೇಶದಲ್ಲಿ ಈಗಾಗಲೇ ಐದು ಹಂತಗಳ ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು ಕೇವಲ ಇನ್ನೆರೆಡು ಹಂತಗಳ ಚುನಾವಣೆ ಬಾಕಿ ಉಳಿದಿದೆ. ಒಂದೆಡೆ ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಕೇಂದ್ರದಲ್ಲಿ ತನ್ನದೇ ಅಧಿಕಾರ ಎಂಬ ಭರವಸೆಯಲ್ಲಿದೆ. ಇತ್ತ ಎನ್‌ಡಿಎ ಸರ್ಕಾರ ಈ ಬಾರಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ, ಮಗಹದೊಮ್ಮೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಕೇಂದ್ರದಲ್ಲಿ ಸರ್ಕಾರ ಮುಂದುವರೆಸಲಿದ್ದಾರೆ ಎಂದು ಬಿಜೆಪಿ ಭರವಸೆ ವ್ಯಕ್ತಪಡಿಸಿದೆ.

ಸದ್ಯ ಇದೆಲ್ಲದರ ನಡುವೆ ಅಮೇರಿಕಾ ರಾಜಕೀಯ ತಜ್ಞ ಇಯಾನ್‌ ಬ್ರೆಮ್ಮರ್‌, ಮೋದಿ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ʼʼ ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ 215 ರಿಂದ 315 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ. ಯುರೇಷಿಯಾ ಗುಂಪಿನ ಚುನಾವಣೆಗಳ ಭವಿಷ್ಯ 305=0 ಆಗಿದೆ. ಇನ್ನು 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 543 ಸ್ಥಾನಗಳಲ್ಲಿ 303 ಸ್ಥಾನಗಳನ್ನು ಗೆದ್ದಿತ್ತು. ಪ್ರಪಂಚದ ಇತರ ದೃಷ್ಟಿಕೋನದಿಂದ ನೋಡುವುದಾದರೆ, ಭಾರತವು ದೀರ್ಘಕಾಲದವರೆಗೆ ಕಳಪೆ ಪ್ರದರ್ಶನ ನೀಡಿದ ಆರ್ಥಿಕತೆಯಾಗಿದೆ, ಆದರೆ ಈಗ ಬಹಳಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಎಂದು ಇಯಾನ್‌ ಹೇಳಿದರು.

Ad
Ad
Nk Channel Final 21 09 2023
Ad