Bengaluru 25°C
Ad

ಬಾಲಿವುಡ್ ನಟ ಶಾರುಖ್ ಖಾನ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಬಾಲಿವುಡ್ ನಟ ಶಾರುಖ್ ಖಾನ್ ಗೆ ಐಪಿಎಲ್‌ನ ಮೊದಲ ಪ್ಲೈ ಆಫ್ ಪಂದ್ಯದ ನಂತರ ಹೀಟ್ ಸ್ಟ್ರೋಕ್ ಉಂಟಾಗಿದ್ದು ಶಾರುಖ್ ಖಾನ್‌ರನ್ನು ಅಹಮದಾಬಾದ್‌ನ ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.‌

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಗೆ ಐಪಿಎಲ್‌ನ ಮೊದಲ ಪ್ಲೈ ಆಫ್ ಪಂದ್ಯದ ನಂತರ ಹೀಟ್ ಸ್ಟ್ರೋಕ್ ಉಂಟಾಗಿದ್ದು ಶಾರುಖ್ ಖಾನ್‌ರನ್ನು ಅಹಮದಾಬಾದ್‌ನ ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.‌

ಶಾರುಖ್ ಖಾನ್ ಅವರು ಆಸ್ಪತ್ರೆಗೆ ದಾಖಲಾಗಿರುವುದನ್ನು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ. ಆದರೆ ಯಾವ ಕಾರಣಕ್ಕಾಗಿ ಅವರು ಅಡ್ಮಿಟ್ ಆಗಿದ್ದಾರೆ ಎಂಬುದು ತಿಳಿದು ಬಂದಿಲ್ಲ.

ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಡಿಹೈಡ್ರೇಷನ್ ಮತ್ತು ಹೀಟ್ ಸ್ಟ್ರೋಕ್ ಕಾರಣದಿಂದ ಶಾರುಖ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.

ಗುಜರಾತ್‌ನಲ್ಲಿ ಈಗ ಬಿಸಿಗಾಳಿ ಬೀಸುತ್ತಿದೆ. ಕಾರಣಕ್ಕಾಗಿ ಅವರು ಆರೋಗ್ಯ ಸಮಸ್ಯೆಗೆ ಒಳಗಾಗಿದ್ದರು. ಸದ್ಯ ಚಿಕಿತ್ಸೆ ಪಡೆದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಹೇಳಲಾಗಿದೆ.

Ad
Ad
Nk Channel Final 21 09 2023
Ad