Bengaluru 22°C
Ad

ರಾಜಸ್ಥಾನ್​​ ರಾಯಲ್ಸ್​ಗೆ 173 ರನ್​ಗಳ ಗುರಿ ನೀಡಿದ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು

ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​ 17ನೇ ಸೀಸನ್​​ ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ್​​ ರಾಯಲ್ಸ್​ಗೆ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು 173 ರನ್​ಗಳ ಗುರಿ ನೀಡಿದೆ.

ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್​ ತಂಡದ ಕ್ಯಾಪ್ಟನ್​ ಸಂಜು ಸ್ಯಾಮ್ಸನ್​​​ ಬೌಲಿಂಗ್​​ ಆಯ್ಕೆ ಮಾಡಿಕೊಂಡರು. ಹಾಗಾಗಿ  ಆರ್​ಸಿಬಿ ಫಸ್ಟ್​ ಬ್ಯಾಟಿಂಗ್​ ಮಾಡಬೇಕಾಯ್ತು.

ಆರ್​​ಸಿಬಿ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಕೇವಲ 14 ಬಾಲ್​ನಲ್ಲಿ 17 ರನ್​ ಗಳಿಸಿ ಔಟಾದ್ರು. ಈ ಪೈಕಿ 1 ಸಿಕ್ಸರ್​​, 2 ಫೋರ್​ ಗಳಿಸಿದ್ರು.ಇವರ ಬಳಿಕ ಬ್ಯಾಟ್​ ಬೀಸಿದ್ದ ವಿರಾಟ್​ ಕೊಹ್ಲಿ 24 ಬಾಲ್​ನಲ್ಲಿ 33 ರನ್​ ಗಳಿಸಿ ವಿಕೆಟ್​ ಒಪ್ಪಿಸಿದ್ರು.

ಬಳಿಕ ಬಂದ ಕ್ಯಾಮೆರಾನ್​ ಗ್ರೀನ್​ 21 ಬಾಲ್​ನಲ್ಲಿ 1 ಸಿಕ್ಸರ್​​, 2 ಫೋರ್​ ಸಮೇತ 27 ರನ್​ ಸಿಡಿಸಿದ್ರು. ರಜತ್​ ಪಾಟಿದಾರ್​​ 22 ಬಾಲ್​ನಲ್ಲಿ 2 ಸಿಕ್ಸರ್​​, 2 ಫೋರ್​ ಸಮೇತ 34 ರನ್​ ಚಚ್ಚಿದ್ರು. ಮಹಿಪಾಲ್​ ಲೋಮ್ರೋರ್​​ 17 ಬಾಲ್​ನಲ್ಲಿ 2 ಸಿಕ್ಸರ್​​, 2 ಫೋರ್​ ಸಮೇತ 32 ರನ್​ ಬಾರಿಸಿದ್ರು. ದಿನೇಶ್​ ಕಾರ್ತಿಕ್​​ ಕೇವಲ 11 ರನ್​ಗೆ ವಿಕೆಟ್​ ಒಪ್ಪಿಸಿದ್ರು.

ಆರ್​​ಸಿಬಿ ನಿಗದಿತ 20 ಓವರ್​ನಲ್ಲಿ 8 ವಿಕೆಟ್​ ನಷ್ಟಕ್ಕೆ 172 ರನ್​ ಕಲೆ ಹಾಕಿದೆ.

Ad
Ad
Nk Channel Final 21 09 2023
Ad