Bengaluru 22°C
Ad

ಶಾಲಾ ಪ್ರವೇಶ ವಯೋಮಿತಿ ಸಡಿಲಿಕೆಯಲ್ಲಿ ಯಾವುದೇ ನಿರ್ಧಾರ ಇಲ್ಲ: ಮಧು ಬಂಗಾರಪ್ಪ

ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಪವಿತ್ರತೆ ಉಳಿಸಲು ಈ ಬಾರಿ 20 ಗ್ರೇಸ್ ಅಂಕ ನೀಡಲಾಗಿದೆ. ಗ್ರೇಸ್ ಅಂಕ ನೀಡಿರುವುದು ಈ ವರ್ಷಕ್ಕೆ ಮಾತ್ರ. ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರೇಸ್ ಅಂಕ ಇರುವುದಿಲ್ಲ. ಅಲ್ಲದೆ, ಈ ಬಾರಿಯ ಎರಡು ಮತ್ತು ಮೂರನೇ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೂ ಗ್ರೇಸ್ ಅಂಕ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಪವಿತ್ರತೆ ಉಳಿಸಲು ಈ ಬಾರಿ 20 ಗ್ರೇಸ್ ಅಂಕ ನೀಡಲಾಗಿದೆ. ಗ್ರೇಸ್ ಅಂಕ ನೀಡಿರುವುದು ಈ ವರ್ಷಕ್ಕೆ ಮಾತ್ರ. ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರೇಸ್ ಅಂಕ ಇರುವುದಿಲ್ಲ. ಅಲ್ಲದೆ, ಈ ಬಾರಿಯ ಎರಡು ಮತ್ತು ಮೂರನೇ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೂ ಗ್ರೇಸ್ ಅಂಕ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಉಡುಪಿ ಕಾಂಗ್ರೆಸ್ ಭವನದಲ್ಲಿ‌ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಮೊದಲು ಟಾಪರ್ಸ್ ಆಗಿ ಇರುತ್ತಿದ್ದವು. ನಂತರ ಈ ಜಿಲ್ಲೆಗಳ ಫಲಿತಾಂಶ ಇಳಿಕೆಯಾಗಿತ್ತು.

ಈಗ ಮತ್ತೆ ಉಡುಪಿ, ಮಂಗಳೂರು ಟಾಪರ್ಸ್‌ ಆಗಿದೆ. ಇದಕ್ಕೆ ಕಾರಣ ನಾವು ಪರೀಕ್ಷೆಯ ಪವಿತ್ರತೆಯನ್ನು ಉಳಿಸಿರುವುದು. ಪರೀಕ್ಷೆಯ ಪವಿತ್ರತೆಯನ್ನು ಕಾಪಾಡುವ ವಿಚಾರದಲ್ಲಿ ಇಲಾಖೆ ತುಂಬಾ ಗಂಭೀರವಾಗಿ ಕೆಲಸ ಮಾಡಬೇಕು ಎಂದರು.

ಶಾಲಾ ಪುನಾರರಂಭಕ್ಕೆ ಸಂಬಂಧಿಸಿ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ. ಪುಸ್ತಕಗಳು ಯುನಿಫಾರ್ಮ್ ಸೇರಿದಂತೆ ಎಲ್ಲ ಸೌಲಭ್ಯಗಳು ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ತಲುಪಲಿದೆ. ಮೇ 27ರಿಂದ ನಲಿ ಕಲಿ ಆರಂಭವಾಗುತ್ತದೆ ಎಂದು ಸಚಿವರು ತಿಳಿಸಿದರು.

ಶಾಲಾ ಪ್ರವೇಶ ವಯೋಮಿತಿ ಸಡಿಲಿಕೆ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಎಲ್‌ಕೆಜಿ ಸೇರುವ ಮಕ್ಕಳಿಗೆ ನಾಲ್ಕು ವರ್ಷ ಪೂರ್ಣವಾಗಬೇಕು. ಈ ವಿಚಾರದಲ್ಲಿ ಸಡಲಿಕೆ ಸಾಧ್ಯವಿಲ್ಲ. ಆ ಆದೇಶವನ್ನು ನಾವು ಕಡ್ಡಾಯವಾಗಿ ಫಾಲೋ ಮಾಡುತ್ತೇವೆ. ಅಧ್ಯಯನದ ಮೂಲಕ ಈ ಕಾನೂನು ಮಾಡಿದ್ದಾರೆ ಎಂದು ಅವರು ಹೇಳಿದರು.

500 ಕೆಪಿಎಸ್ ಶಾಲೆಗಳು ಮೇಲ್ದರ್ಜೆಗೆ:
ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಹೆಚ್ಚಿನ ಬೇಡಿಕೆಗಳು ಬರುತ್ತಿವೆ. ಕೆಪಿಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶಗಳು ಬರುತ್ತಿವೆ. ಈ ಶಾಲೆಗಳ ಬಗ್ಗೆ ನಮ್ಮ ಸರಕಾರ ಬದ್ಧತೆ ಹೊಂದಿದೆ. ಈ ವರ್ಷ ರಾಜ್ಯದಲ್ಲಿ 500 ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಪ್ರತಿ ಕ್ಷೇತ್ರಗಳಲ್ಲೂ 3-6 ಶಾಲೆಗಳನ್ನು ಗುರುತಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

Ad
Ad
Nk Channel Final 21 09 2023
Ad