Bengaluru 24°C
Ad

ಶಾರುಖ್​ ಖಾನ್​ ಆರೋಗ್ಯ ಸ್ಥಿತಿ ಹೇಗಿದೆ?; ಅಪ್​ಡೇಟ್​ ಕೊಟ್ಟ ನಟಿ ಜೂಹಿ ಚಾವ್ಲಾ

Srk

ಮುಂಬೈ: ಕೆಕೆಆರ್ ಪಂದ್ಯವನ್ನು ವೀಕ್ಷಿಸಲು ಅಹಮದಾಬಾದ್‌ಗೆ ಆಗಮಿಸಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಇದ್ದಕ್ಕಿದ್ದಂತೆಯೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೀಟ್‌ ಸ್ಟ್ರೋಕ್‌ನಿಂದ ದಿಢೀರ್ ಎಂದು ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ಹೇಳಲಾಗಿತ್ತು.

ಎಸ್​ಆರ್​ಎಚ್​ ವಿರುದ್ಧದ ಪಂದ್ಯದಲ್ಲಿ ಕೆಕೆಆರ್​ ಜಯ ಗಳಿಸಿತ್ತು. ಆಗ ಶಾರುಖ್ ಖಾನ್ ಅವರು ಇಡೀ ಗ್ರೌಂಡ್ ಸುತ್ತಾಡಿದ್ದರು. ಅಭಿಮಾನಿಗಳತ್ತ ಕೈ ಬೀಸಿದ್ದರು. ಅಷ್ಟಾಗುತ್ತಿದ್ದಂತೆಯೇ ದಿಢೀರನೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಸದ್ಯ ಆಸ್ಪತ್ರೆಯಲ್ಲಿಯೇ ನಟನಿಗೆ ಚಿಕಿತ್ಸೆ ಮುಂದುವರೆದಿದೆ. ಆಸ್ಪತ್ರೆಗೆ ಬಾಲಿವುಡ್​ ದಿಗ್ಗಜರ ಮಹಾಪೂರವೇ ಹರಿದು ಬರುತ್ತಿದೆ. ಆಸ್ಪತ್ರೆಯಿಂದ ಇದೀಗ ಮಾಹಿತಿ ಹೊರಬಂದಿದ್ದು, ಅಲ್ಲಿಂದಲೇ ನಟಿ ಜೂಹಿ ಚಾವ್ಲಾ ಅವರು ನಟನ ಆರೋಗ್ಯದ ಅಪ್​ಡೇಟ್​ ನೀಡಿದ್ದಾರೆ.

ಶಾರುಖ್​ ಅವರ ಕುರಿತು ಹೇಳಿರುವ ನಟಿ ಜೂಹಿ ಚಾವ್ಲಾ, ‘ಮೇ 21ರಂದು ಅವರಿಗೆ ಅನಾರೋಗ್ಯ ಕಾಡಿತ್ತು. ಆದಾಗ್ಯೂ ಅವರು ಮ್ಯಾಚ್​​ ವೀಕ್ಷಿಸಿದರು. ಈಗ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರು ಶೀಘ್ರವೇ ಸಂಪೂರ್ಣ ಚೇತರಿಕೆ ಕಾಣಲಿದ್ದಾರೆ. ಫಿನಾಲೆ ವೀಕ್ಷಿಸಲಿದ್ದಾರೆ’ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಮಾಧಾನ ತಂದುಕೊಟ್ಟಿದ್ದಾರೆ. ಅಹಮದಾಬಾದ್​ನಲ್ಲಿ ಸಾಕಷ್ಟು ಸೆಕೆ ಇದೆ. ಈ ಕಾರಣಕ್ಕೆ ಅವರಿಗೆ ಸನ್ ಸ್ಟ್ರೋಕ್ ಆಗಿರಬಹುದು ಎಂದು ಊಹಿಸಲಾಗಿದೆ.

ಹೀಟ್ ಸ್ಟ್ರೋಕ್ ಹಾಗೂ ನಿರ್ಜಲೀಕರಣ ಉಂಟಾಗಿರುವ ಕಾರಣ, ಈ ಸಮಸ್ಯೆ ಆಗಿದೆ. ಈ ಕಾರಣಕ್ಕೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದಿರುವ ನಟಿ, ಈಗ ಶಾರುಖ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಶೀಘ್ರವೇ ಅವರು ಡಿಸ್ಚಾರ್ಜ್ ಆಗಲಿದ್ದಾರೆ. ಚೆನ್ನೈನಲ್ಲಿ ನಡೆಯಲಿರುವ ಫಿನಾಲೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

Ad
Ad
Nk Channel Final 21 09 2023
Ad