Bengaluru 23°C
Ad

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು: ಓರ್ವ ಮೃತ್ಯು

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದ ಘಟನೆ ಅಂಬಳೆ ಕೆರೆಯಲ್ಲಿ ನಡೆದಿದೆ. ದಿನೇಶ್ (33) ಕಾರ್​ನೊಳಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಕಾರ್​​ನಲ್ಲಿದ್ದ ಮತ್ತೊರ್ವ ಸಂತೋಷ್ ಪಾರಾಗಿದ್ದಾರೆ.

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದ ಘಟನೆ ಅಂಬಳೆ ಕೆರೆಯಲ್ಲಿ ನಡೆದಿದೆ. ದಿನೇಶ್ (33) ಕಾರ್​ನೊಳಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಕಾರ್​​ನಲ್ಲಿದ್ದ ಮತ್ತೊರ್ವ ಸಂತೋಷ್ ಪಾರಾಗಿದ್ದಾರೆ.

ಚಿಕ್ಕಮಗಳೂರಿನಿಂದ ಅಂಬಳೆ ಗ್ರಾಮಕ್ಕೆ ಇಬ್ಬರು ಕಾರಿನಲ್ಲಿ ತೆರಳುತ್ತಿದ್ದರು. ಇಂದು ಬೆಳಗ್ಗಿನ ಜಾವ ಅವರಿದ್ದ ಕಾರು ಏಕಾಏಕಿ ಕೆರೆಗೆ ಬಿದ್ದಿದೆ. ಪರಿಣಾಮ ದಿನೇಶ್​ ಅಲ್ಲೇ ಸಾವನ್ನಪ್ಪಿದ್ದಾರೆ. ದಿನೇಶ್ ಹಾಗೂ ಸಂತೋಷ್ ಅಂಬಳೆ ಮೂಲದವರು. ದಿನೇಶ್​​ ಚಿಕ್ಕಮಗಳೂರಿನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದರು.

ಅಗ್ನಿ ಶಾಮಕ ದಳ ಹಾಗೂ ಗ್ರಾಮಾಂತರ ಪೊಲೀಸರ ನೇತೃತ್ವದಲ್ಲಿ ಸಂತೋಷ್​ ಮೃತದೇಹವನ್ನ ನೀರಿನಿಂದ ಹೊರ ತೆಗೆದಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad
Ad
Nk Channel Final 21 09 2023
Ad