News Karnataka Kannada
Saturday, April 13 2024
Cricket
ಬೆಂಗಳೂರು

ಬೆಂಗಳೂರಲ್ಲಿ ಹೊಸ ರೆಸ್ಟೋರೆಂಟ್​​ ಓಪನ್​​​ ಮಾಡಿದ ನಟಿ ಶಿಲ್ಪಾ ಶೆಟ್ಟಿ

ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಾಲಿವುಡ್‌ನ ಗ್ಲಾಮರಸ್ ಬ್ಯೂಟಿ ಶಿಲ್ಪಾ ಶೆಟ್ಟಿ ಆಗಾಗ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಫ್ಯಾನ್ಸ್​ಗಳ ಗಮನ ಸೆಳೆಯುತ್ತಾ ಇರುತ್ತಾರೆ. ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಈಗ ಬೆಂಗಳೂರಿನಲ್ಲಿ ಹೊಸ ರೆಸ್ಟೋರೆಂಟ್ ತೆರೆದಿದ್ದಾರೆ.
Photo Credit : News Kannada

ಬೆಂಗಳೂರು: ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಾಲಿವುಡ್‌ನ ಗ್ಲಾಮರಸ್ ಬ್ಯೂಟಿ ಶಿಲ್ಪಾ ಶೆಟ್ಟಿ ಆಗಾಗ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಫ್ಯಾನ್ಸ್​ಗಳ ಗಮನ ಸೆಳೆಯುತ್ತಾ ಇರುತ್ತಾರೆ. ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಈಗ ಬೆಂಗಳೂರಿನಲ್ಲಿ ಹೊಸ ರೆಸ್ಟೋರೆಂಟ್ ತೆರೆದಿದ್ದಾರೆ.

ಶಿಲ್ಪಾ ಶೆಟ್ಟಿ ಈಗಾಗಲೇ ಮುಂಬೈನ ಎರಡು ಕಡೆಗಳಲ್ಲಿ ‘ಬಾಸ್ಟಿಯನ್’ ಅನ್ನೋ ಸೂಪರ್ ಹಿಟ್ ರೆಸ್ಟೊರೆಂಟ್ ನಡೆಸುತ್ತಿದ್ದಾರೆ.
ಪತಿ ರಾಜ್ ಕುಂದ್ರಾ ಜೊತೆ ಸೇರಿ ಶಿಲ್ಪಾ ಶೆಟ್ಟಿ ಈಗ ಮುಂಬೈನ ಅದೇ ಬ್ರಾಂಚ್‌ ಅನ್ನು ಬೆಂಗಳೂರಿನಲ್ಲಿ ಆರಂಭಿಸ್ತಿದ್ದಾರೆ. ಬೆಂಗಳೂರಿನ ಬಾಸ್ಟಿಯನ್ ಬಹು ದೊಡ್ಡ ಕಾರ್ಪೆಟ್ ಏರಿಯಾ ಹೊಂದಿದ್ದು ಇಂಟೀರಿಯರ್ ಕೆಲಸ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಮಾರ್ಚ್ 2024ಕ್ಕೆ ‘ಬಾಸ್ಟಿಯನ್ ಬೆಂಗಳೂರು’ ಓಪನ್​ ಆಗಲಿದೆ.

ಇನ್ನೂ ನೂತನ ರೆಸ್ಟೋರೆಂಟ್ ಹೊಸ ಫೋಟೋ ಹಾಗೂ ವಿಡಿಯೋಗಳನ್ನು ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಅಶೋಕನಗರದ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ‘ಬಾಸ್ಟಿಯನ್’ ರೆಸ್ಟೋರೆಂಟ್‌ ಓಪನ್​ ಆಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು