Bengaluru 24°C
Ad

ರಾತ್ರೋರಾತ್ರಿ ತುಮಕೂರು ಮಹಾನಗರ ಪಾಲಿಕೆಯಲ್ಲಿ ಜೆಸಿಬಿಗಳ ಅಬ್ಬರ

ತುಮಕೂರು ಹೊರವಲಯದ ಎಸ್‌ಎಸ್‌ಐಟಿ ಕಾಲೇಜು ಪಕ್ಕದಲ್ಲಿ ವಾಸವಿದ್ದಂತಹ ಶೆಡ್‌ಗಳನ್ನ ಪಾಲಿಕೆ ಅಧಿಕಾರಿಗಳು ಜೆಸಿಬಿಗಳ ಮೂಲಕ ನೆಲಸಮಗೊಳಿಸಿದ್ದಾರೆ.

ತುಮಕೂರು: ತುಮಕೂರು ಹೊರವಲಯದ ಎಸ್‌ಎಸ್‌ಐಟಿ ಕಾಲೇಜು ಪಕ್ಕದಲ್ಲಿ ವಾಸವಿದ್ದಂತಹ ಶೆಡ್‌ಗಳನ್ನ ಪಾಲಿಕೆ ಅಧಿಕಾರಿಗಳು ಜೆಸಿಬಿಗಳ ಮೂಲಕ ನೆಲಸಮಗೊಳಿಸಿದ್ದಾರೆ.

ನಡುರಾತ್ರಿ ಕಳ್ಳರಂತೆ ನುಗ್ಗಿ ಪಾಲಿಕೆ ಅಧಿಕಾರಿಗಳು ಶೆಡ್‌ಗಳನ್ನ ನೆಲಸಮಗೊಳಿಸಿದ್ದಾರೆ ಎಂದು ಇಪ್ಪತ್ತು ವರ್ಷಗಳಿಂದಲೂ ಶೆಡ್‌ಗಳಲ್ಲಿ ವಾಸವಿದ್ದ ಸತೀಶ್ ಹಾಗೂ ಕುಟುಂಬ ವರ್ಗ ಆರೋಪಿಸಿದ್ದಾರೆ.

ಯಾವುದೇ ನೊಟೀಸ್ ನೀಡದೆ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರ ನೇತೃತ್ವದಲ್ಲಿ ಶೆಡ್‌ಗಳ ಧ್ವಂಸ ಮಾಡಲಾಗಿದ್ದು, ಹೆಂಗಸರು-ಮಕ್ಕಳೆನ್ನದೆ ಹೊರದಬ್ಬಿ ಮನೆಯಲ್ಲಿದ್ದ ವಸ್ತುಗಳನ್ನು ಹೊರಹಾಕಿದ್ದಾರೆ.

87/1A ರ ಜಮೀನಿನಲ್ಲಿನ ಶೆಡ್‌ಗಳನ್ನ ತೆರವುಗೊಳಿಸಿ ಪಾಲಿಕೆ ಸ್ವತ್ತು ಅಂತಾ ಬೋರ್ಡ್ ಹಾಕಿದ್ದಾರೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Ad
Ad
Nk Channel Final 21 09 2023
Ad