Bengaluru 22°C
Ad

ಬಾನೆಟ್‌ ಮೇಲೆ ವ್ಯಕ್ತಿಯೊಬ್ಬನನ್ನು ಮಲಗಿಸಿಕೊಂಡು ಅಪ್ರಾಪ್ತ ಬಾಲಕನಿಂದ ಡ್ರೈವಿಂಗ್‌: ವಿಡಿಯೋ ವೈರಲ್

ವ್ಯಕ್ತಿಯೊಬ್ಬನನ್ನು ಬಾನೆಟ್‌ ಮೇಲೆ ಮಲಗಿಸಿಕೊಂಡು 17ವರ್ಷದ ಬಾಲಕನೋರ್ವ ತಂದೆಯ BMW ಕಾರು ಚಲಾಯಿಸಿದ ಘಟನೆ ಥಾಣೆಯ ಕಲ್ಯಾಣ್‌ ನಗರದ ಜನ ನಿಬಿಡ ಶಿವಾಜಿ ಚೌಕ್‌ ಪ್ರದೇಶದಲ್ಲಿ ನಡೆದಿದೆ.

ನವದೆಹಲಿ: ವ್ಯಕ್ತಿಯೊಬ್ಬನನ್ನು ಬಾನೆಟ್‌ ಮೇಲೆ ಮಲಗಿಸಿಕೊಂಡು 17ವರ್ಷದ ಬಾಲಕನೋರ್ವ ತಂದೆಯ BMW ಕಾರು ಚಲಾಯಿಸಿದ ಘಟನೆ ಥಾಣೆಯ ಕಲ್ಯಾಣ್‌ ನಗರದ ಜನ ನಿಬಿಡ ಶಿವಾಜಿ ಚೌಕ್‌ ಪ್ರದೇಶದಲ್ಲಿ ನಡೆದಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬಾಲಕ, ಬಾನೆಟ್‌ನಲ್ಲಿದ್ದ ವ್ಯಕ್ತಿ ಹಾಗೂ ಬಾಲಕನ ತಂದೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣದ ರೀಲ್ಸ್‌ನಿಂದಾಗಿ ಪ್ರಭಾವಿತನಾಗಿ ನಿವೃತ ಸರ್ಕಾರಿ ಅಧಿಕಾರಿಯ ಅಪ್ರಾಪ್ತ ವಯಸ್ಸಿನ ಪುತ್ರ BMW ಕಾರಿನ ಬಾನೆಟ್‌ ಮೇಲೆ ವ್ಯಕ್ತಿಯೊಬ್ಬನನ್ನು ಮಲಗಿಸಿಕೊಂಡು ಡ್ರೈವಿಂಗ್‌ ಮಾಡಿದ್ದಾನೆ.

ಇನ್ನು ಕಾರು ಬಾನೆಟ್‌ ಮೇಲಿದ್ದ ವ್ಯಕ್ತಿಯನ್ನು ಶುಭಮ್‌ ಮಿಥಿಲಾ ಎಂದು ಗುರುತಿಸಲಾಗಿದೆ. ಈ ಸೆಕೆಂಡ್‌ ಹ್ಯಾಂಡ್‌ ಕಾರನ್ನು 5ಲಕ್ಷ ರೂ ನೀಡಿ ಬಾಲಕನ ತಂದೆ ಖರೀದಿಸಿದ್ದ ಎನ್ನಲಾಗಿದೆ. ಇದೀಗ ಕಾರು ಮಾಲೀಕನ ವಿರುದ್ಧ ಕೇಸ್‌ ದಾಖಲಾಗಿದೆ.

 

 

Ad
Ad
Nk Channel Final 21 09 2023
Ad