Bengaluru 29°C
Ad

ಪೋರ್ಷೆ ಕಾರು ಅಪಘಾತ : ಆರೋಪಿಯ ರಕ್ತದ ಮಾದರಿ ಬದಲಿಸಲು 3ರೂ ಲಕ್ಷ ಲಂಚ

ಪೋರ್ಷೆ ಕಾರು ಅಪಘಾತ ಪ್ರರಕರಣ ದಿನದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.ಅಪ್ರಾಪ್ತ ಆರೋಪಿ ವೇದಾಂತ್​ ರಕ್ತದ ಮಾದರಿಯನ್ನು ಬದಲಾಯಿಸಲು ಆಸ್ಪತ್ರೆ ಸಿಬ್ಬಂದಿಗೆ 3 ಲಕ್ಷ ರು. ಕೊಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಪುಣೆಯಲ್ಲಿ ನಡೆದ  ಪೋರ್ಷೆ ಕಾರು ಅಪಘಾತ ಪ್ರರಕರಣ ದಿನದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.ಅಪ್ರಾಪ್ತ ಆರೋಪಿ ವೇದಾಂತ್​ ರಕ್ತದ ಮಾದರಿಯನ್ನು ಬದಲಾಯಿಸಲು ಆಸ್ಪತ್ರೆ ಸಿಬ್ಬಂದಿಗೆ 3 ಲಕ್ಷ ರೂ ಕೊಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಆರೋಪಿಯನ್ನು ನಿರಪರಾಧಿ ಎಂದು ಸಾಭೀತು ಪಡಿಸಲು ಈ ಮೋಸದ ಕೃತ್ಯವೆಸಗಿದ್ದಾರೆ. ಆತನ ನಿಜವಾದ ರಕ್ತದ ಮಾದರಿಯನ್ನು ಡಸ್ಟಬಿನ್‌ಗೆ ಎಸದು, ಕಳಪೆ ಮಾದರಿಯನ್ನು ಬದಲಾಯಿಸಿದ್ದಾರೆ. ರಕ್ತ ಪರೀಕ್ಷೆಯಲ್ಲಿ ಆಲ್ಕೋಹಾಲ್‌ ಅಂಶ ಇಲ್ಲ ಎಂದು ಸಾಭೀತು ಪಡಿಸಲು ಈ ಕೃತ್ಯ ಎಸಗಲಾಗಿದೆ.

ಈ ಸಂಬಂಧ ಆಸ್ಪತ್ರೆ ಇಬ್ಬರ ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರೀಕ್ಷಾ ವರದಿಯಲ್ಲಿ ಆತನ ರಕ್ತದಲ್ಲಿ ಆಲ್ಕೋಹಾಲ್ ಇರಲಿಲ್ಲ ಎನ್ನುವ ವಿಚಾರ ಪೊಲೀಸರಿಗೆ ಆಶ್ಚರ್ಯ ಮೂಡಿಸಿತ್ತು.

ಮೇ 19ರಂದು ಕುಡಿದ ಮತ್ತಿನಲ್ಲಿ ವೇದಾಂತ್​ ಅಗರ್ವಾಲ್​ ತನ್ನ ಐಷಾರಾಮಿ ಪೋರ್ಷೆ ಕಾರು ಓಡಿಸಿ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಸಂಬಂಧ ವೇದಾಂತ್‌ನನ್ನು ಪೊಲೀಸರು ಬಂಧಿಸಿದ್ದರು.

Ad
Ad
Nk Channel Final 21 09 2023
Ad