News Karnataka Kannada
Monday, April 22 2024
Cricket
ಉಡುಪಿ

ಈ ಹುಣ್ಣಿಮೆಯಿಂದ ಸೂಪರ್ ಮೂನ್ ಗಳ ಸರಮಾಲೆ: ಡಾ.ಎ.ಪಿ. ಭಟ್

A series of supermoons from this full moon: Dr. A.P. Bhatt
Photo Credit : News Kannada

ಉಡುಪಿ: ಇಂದಿನಿಂದ ನಾಲ್ಕು ಹುಣ್ಣಿಮೆಗಳೂ ಸೂಪರ್ ಮೂನ್. ಜುಲೈ3, ಆಗಸ್ಟ್ 1, ಆಗಸ್ಟ್ 31, ಹಾಗೂ ಸಪ್ಟಂಬರ್ 29 ಎಲ್ಲಾ ಹಣ್ಣಿಮೆಗಳೂ ಸೂಪರ್ಮೂನ್ಗಳೇ. ಸೂಪರ್ಮೂನ್ ಎಂದರೆ ಹುಣ್ಣಿಮೆ ದಿನ ಚಂದ್ರ ಮಾಮೂಲಿಗಿಂತ ದೊಡ್ಡದಾಗಿ ಕಾಣುತ್ತದೆ.

ಚಂದ್ರ ಎಲ್ಲಾ ಹುಣ್ಣಿಮೆಗಳಲ್ಲಿ ಚಂದ್ರ ಒಂದೇ ಗಾತ್ರದಲ್ಲಿ ಕಾಣುವುದಿಲ್ಲ. ಸೂಪರ್ಮೂನ್ಗಳಲ್ಲಿ ಮಾಮೂಲಿ ಗಾತ್ರಕ್ಕಿಂತ ದೊಡ್ಡದಾಗಿ ಕಂಡರೆ ಮೈಕ್ರೊ ಮೂನ್ಗಳಲ್ಲಿ ಚಿಕ್ಕದಾಗಿ ಕಾಣುತ್ತದೆ. ಇದಕ್ಕೆ ಕಾರಣ ಚಂದ್ರ ಭೂಮಿಯಿಂದ ಯಾವಾಗಲೂ ಒಂದೇ ಸಮಾನವಾದ ದೂರದಲ್ಲಿರುವುದಿಲ್ಲ. ಚಂದ್ರ ಭೂಮಿಯ ಸುತ್ತ ಸುತ್ತುವ ಪಥ ದೀರ್ಘವೃತ್ತವಾಗಿರುವುದರಿಂದ ಒಂದು ಸುತ್ತು ಸುತ್ತುವಾಗ ಒಮ್ಮೆ ಅತೀದೂರ (ಅಪೊಜಿ) ಅಪಭೂದಲ್ಲಿದ್ದರೆ ಒಮ್ಮೆ ಅತೀ ಸಮೀಪ ( ಪೆರಿಜಿ ) ಪರಭೂದಲ್ಲಿರುತ್ತದೆ.

ಚಂದ್ರ ಭೂಮಿಗಳ ಸರಾಸರಿ ದೂರ 3, 84400 ಕಿಮೀ ಆದರೆ, ಸಮೀಪದೂರ 3, 56000 ಕಿಮೀ ಹಾಗೂ ದೂರದದೂರ 4,06000 ಕಿಮೀ. ಹತ್ತಿರಬಂದಾಗ ವಸ್ತು ದೊಡ್ಡದಾಗಿ ಕಾಣುವುದು , ದೂರಹೊದಂತೆ ಚಿಕ್ಕದಾಗಿ ಕಾಣುವುದು ಪ್ರಕೃತಿವಿಯಮ. ಹಾಗಾಗಿ ಸೂಪರ್ ಮೂನಿನ ದಿನ ಚಂದ್ರ ಸುಮಾರು 30 ಸಾವಿರ ಕಿಮೀ ಹತ್ತಿರ ಬರುವುದರಿಂದ ಸುಮಾರು 14ಅಂಶ ದೊಡ್ಡದಾಗಿ ಕಂಡು ಸುಮಾರು 24ಅಂಶದಷ್ಟು ಚಂದ್ರಪ್ರಭೆ ಹೆಚ್ಚಿರುತ್ತದೆ.

ಜುಲೈ 3ರಂದು ಚಂದ್ರ ಭೂಮಿಯಿಂದ 3,61800 ಕಿಮೀ , ಆಗಸ್ಟ್ 1 ರಂದು 3,57530 ಕಿಮೀ ,ಆಗಸ್ಟ್ 31 ರಂದು 3,57 344 ಕಿಮೀ ಹಾಗೂ ಸಪ್ಟಂಬರ್ 29 ರಂದು 3,61552 ಕಿಮೀ ಇರಲಿದೆ. ಸಮುದ್ರದ ಭರತ ಇಳಿತಗಳಿಗೆ ಚಂದ್ರನ ಆಕರ್ಷಣೆಯೂ ಕಾರಣ . ಹಾಗಾಗಿ ಸೂಪರ್ ಮೂನ್ಗಳಲ್ಲಿ ಸಮುದ್ರದ ತರೆಗಳ ಅಬ್ಬರ ಹೆಚ್ಚಿರುತ್ತದೆ ಎಂದು ಖಗೋಳ ಶಾಸ್ತ್ರಜ್ಞ ಡಾ ಎ. ಪಿ . ಭಟ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು