Bengaluru 27°C
Ad

ನೀರಿಗಾಗಿ ಹಾಹಾಕಾರ: ಲಾರಿ ಕಾಣದಂತೆ ಸುತ್ತಲೂ ನಿಂತ ಜನರು : ವಿಡಿಯೋ ವೈರಲ್‌

ಹಲವು ಕಡೆ ನೀರಿನ ಸಮಸ್ಯೆ ಮತ್ತೆ ಉಲ್ಬಣಿಸಿದ್ದು, ದೆಹಲಿಯಲ್ಲಿ ತಾಪಮಾನ 50ರ ಗಡಿ ದಾಟಿರುವುದು ಎಲ್ಲರನ್ನು ಆತಂಕಕ್ಕೆ ತಳ್ಳಿದೆ. ಇದರ ಜೊತೆಗೆ ರಾಷ್ಟ್ರ ರಾಜಧಾನಿಯ ಹಲವು ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ ಏರ್ಪಟ್ಟಿದೆ.

ನವದೆಹಲಿ: ಹಲವು ಕಡೆ ನೀರಿನ ಸಮಸ್ಯೆ ಮತ್ತೆ ಉಲ್ಬಣಿಸಿದ್ದು, ದೆಹಲಿಯಲ್ಲಿ ತಾಪಮಾನ 50ರ ಗಡಿ ದಾಟಿರುವುದು ಎಲ್ಲರನ್ನು ಆತಂಕಕ್ಕೆ ತಳ್ಳಿದೆ. ಇದರ ಜೊತೆಗೆ ರಾಷ್ಟ್ರ ರಾಜಧಾನಿಯ ಹಲವು ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ ಏರ್ಪಟ್ಟಿದೆ.

Ad

ದೆಹಲಿಯ ಜನರು ಈಗ ತೀವ್ರ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಚಾಣಕ್ಯಪುರಿಯ ಸಂಜಯ್ ಕ್ಯಾಂಪ್ ಪ್ರದೇಶ, ಪೂರ್ವ ದೆಹಲಿಯ ಗೀತಾ ಕಾಲೋನಿ, ಮೆಹ್ರಾಲಿ ಮತ್ತು ಚತ್ತರ್‌ಪುರ ಸೇರಿದಂತೆ ನಗರದ ವಿವಿಧ ಭಾಗಗಳು ಹೆಚ್ಚು ನೀರಿನ ಸಮಸ್ಯೆ ತಲೆದೂರಿದೆ.

Ad

ದೆಹಲಿಯಲ್ಲಿರುವ ಎಎಪಿ ಸರ್ಕಾರ ಏರಿಯಾಗಳಿಗೆ ಲಾರಿ ಮೂಲಕ ನೀರನ್ನು ಸರಬಾರಾಜು ಮಾಡುತ್ತಿದೆ. ಈ ಲಾರಿಗಳು ಇನ್ನು ರಸ್ತೆಯಲ್ಲಿ ಬರುತ್ತಿರುವಾಗಲೇ ಓಡೋಡಿ ಬರುವ ಮಹಿಳೆಯರು, ಪುರುಷರು ಲಾರಿ ಮೇಲೆ ಏರಿ ಪೈಪ್ ಹಾಕಿ ಬಿಡುತ್ತಾರೆ.

Ad

ಲಾರಿ ಸುತ್ತಲೂ ಜನ ಮೇಲೆ, ಕೆಳಗೆ ನಿಲ್ಲುವುದರಿಂದ ಲಾರಿ ಕಾಣುವುದಿಲ್ಲ. ಆ ಮಟ್ಟಿಗೆ ಜನ ನೀರಿಗಾಗಿ ತುಂಬಿಕೊಂಡಿರುತ್ತಾರೆ. ಸದ್ಯ ಇದರ ಒಂದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದು ನೋಡುಗರನ್ನ ಅಚ್ಚರಿ ಮೂಡಿಸಿದೆ.

Ad

ಈ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್​ ನೇತೃತ್ವದ ಎಎಪಿ ಸರ್ಕಾರ ಸುಪ್ರೀಂ ಕೋರ್ಟ್​ ಮೊರೆ ಹೋಗಿದೆ. ಇನ್ನು ಒಂದು ತಿಂಗಳುಗಳ ಕಾಲ ನಮಗೆ ನೀರಿನ ಸಮಸ್ಯೆ ಹೀಗೆ ಇರಲಿದೆ.

Ad

ಹೀಗಾಗಿ ಹರಿಯಾಣ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಿಂದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡಬೇಕು ಎಂದು ಕೇಂದ್ರ ಮತ್ತು ಕೋರ್ಟ್‌ಗೆ ಎಎಪಿ ಸರ್ಕಾರ ಮನವಿ ಮಾಡಿದೆ.

Ad
Ad
Ad
Nk Channel Final 21 09 2023