Bengaluru 22°C
Ad

ಬೊಳ್ಳೂರಿನಲ್ಲಿ ನೆರವೇರಿದ ರಿಲಯನ್ಸ್ ಎಸೋಸಿಯೇಶನ್ ನ “ನಮ್ಮ ಸಹೋದರಿ”ಯ ವಿವಾಹ ಕಾರ್ಯಕ್ರಮ

Bollur

ಹಳೆಯಂಗಡಿ: ರಿಲಯನ್ಸ್ ಎಸೋಸಿಯೇಶನ್ (ರಿ) ಬೊಳ್ಳೂರು ಹಳೆಯಂಗಡಿ ಇದರ 27ನೇ ವಾರ್ಷಿಕೋತ್ಸವದ ಪ್ರಯುಕ್ತ ” ನಮ್ಮ ಸಹೋದರಿ”ಯ ವಿವಾಹ ಕಾರ್ಯಕ್ರಮವು ಮೇ 26ರಂದು ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ವಠಾರದಲ್ಲಿ ನೆರವೇರಿತು.
Vivah

ರಿಲಯನ್ಸ್ ಎಸೋಸಿಯೇಶನ್ ಅಧ್ಯಕ್ಷ ಕಲಂದರ್ ಕೌಶಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಜೆ.ಎಂ. ಬೊಳ್ಳೂರು ಇದರ ಖತೀಬರು ಹಾಗೂ ಕಿಲ್ತಾನ್ ಲಕ್ಷದ್ವೀಪದ ಖಾಝಿ ಅಲ್-ಹಾಜಿ ಮುಹಮ್ಮದ್ ಅಝ್ಹರ್ ಫೈಝಿ ಉದ್ಘಾಟಿಸಿದರು. ಪಾಣಕ್ಕಾಡ್ ಸಯ್ಯಿದ್ ಹಾಶಿರಲಿ ಶಿಹಾಬ್ ತಂಙಳ್ ನಿಖಾ ನೆರವೇರಿಸಿ, ದುವಾ ಆಶೀರ್ವಚನ ನೀಡಿದರು.
New Project

ಯುನಿವೆಫ್ ಅಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ಲೇಖಕರು ಹಾಗೂ ಸಾಮಜಿಕ ಕಾರ್ಯಕರ್ತ ಇಸ್ಮತ್ ಫಜೀರ್, ನಂಡೆ ಪೆಂಙಳ್ ಅಭಿಯಾನದ ಪ್ರಚಾರ ಮುಖ್ಯಸ್ಥ ರಫೀಕ್ ಮಾಸ್ಟರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಟಿ.ಆರ್.ಎಫ್. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು, ಬೊಳ್ಳೂರು ಎಂ.ಜೆ.ಎಂ. ಮುದರ್ರಿಸ್ ಆರಿಫ್ ಬಾಖವಿ, ಬೊಳ್ಳೂರು ಜುಮಾ ಮಸ್ಜಿದ್ ಅಧ್ಯಕ್ಷ ಪಂಡಿತ್ ಹಾಜಿ ಇದ್ದಿನಬ್ಬ, NHMCT ಮಂಗಳೂರು ಇದರ ಸದಸ್ಯ ಅಬ್ದುಲ್ ಸತಾರ್, ಸೌದಿ ಅನಿವಾಸಿ ಉದ್ಯಮಿ ಅಬ್ದುಲ್ ಜಬ್ಬಾರ್, ರಿಲಯನ್ಸ್ ಎಸೋಸಿಯೇಶನ್ GCC ಅಧ್ಯಕ್ಷ ಅಬ್ದುಲ್ ಜಲೀಲ್, ರಿಲಯನ್ಸ್ ಎಸೋಸಿಯೇಶನ್ GCC ಸಂಯೋಜಕ ಅನೀಸ್ ಸಂಪಿಗೆ, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಅಝೀಝ್, SUMF ಬೊಳ್ಳೂರು ಇದರ ಅಧ್ಯಕ್ಷ ಬಿ.ಇ.ಮುಹಮ್ಮದ್, LIDC ಬೊಳ್ಳೂರು ಅಧ್ಯಕ್ಷ ಅಬ್ದುಲ್ ಅಝೀಝ್, ಅಲ್ ಮದ್ರಸತುಲ್ ಖಿಲ್ ರಿಯಾ ಇಂದಿರಾನಗರ ಇದರ ಅಧ್ಯಕ್ಷ ಮುಹಮ್ಮದ್ ಯೂಸುಫ್ ಉಪಸ್ಥಿತರಿದ್ದರು.
Bollur (1)

ಕಿಲ್ತಾನ್ ಲಕ್ಷದ್ವೀಪದ ನೂತನ ಖಾಝಿಯಾಗಿ ನೇಮಕಗೊಂಡ ಅಲ್-ಹಾಜಿ ಮುಹಮ್ಮದ್ ಅಝ್ಹರ್ ಫೈಝಿ ಅವರನ್ನು ಇದೇ‌ ವೇಳೆ ಸನ್ಮಾನಿಸಲಾಯಿತು.
Sanman

ರಿಲಯನ್ಸ್ ಎಸೋಸಿಯೇಶನ್ ಸದಸ್ಯ ಆರೀಶ್ ನವರಂಗ್ ಸ್ವಾಗತಿಸಿದರು. ರಿಲಯನ್ಸ್ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮುಬಾರಕ್ ಕಾರ್ಯಕ್ರಮ ನಿರೂಪಿಸಿದರು. ಇಕ್ಬಾಲ್ ಎಂ.ಎ. ವಂದಿಸಿದರು.

Bollur (2)

Ad
Ad
Nk Channel Final 21 09 2023
Ad