Bengaluru 22°C
Ad

ಕೋತಿಯ ಕಣ್ಣಿನ ಪೊರೆಗೆ ಶಸ್ತ್ರಚಿಕಿತ್ಸೆ ಮಾಡಿ ದೃಷ್ಟಿ ಮರಳಿಸಿದ ವೈದ್ಯರು

ಮೊಟ್ಟ ಮೊದಲ ಬಾರಿಗೆ ಕೋತಿಯ ಕಣ್ಣಿನ ಪೊರೆಗೆ ಶಸ್ತ್ರಚಿಕಿತ್ಸೆ ಮಾಡಿ ಕೋಲತಿಯ ದೃಷ್ಟಿಯನ್ನು ಮರಳಿಸುವ ಮೂಲಕ ವೈದ್ಯರು ಮಾನವೀಯತೆ ಮೆರೆದಿದ್ದಾರೆ.

ಹರ್ಯಾಣ: ಮೊಟ್ಟ ಮೊದಲ ಬಾರಿಗೆ ಕೋತಿಯ ಕಣ್ಣಿನ ಪೊರೆಗೆ ಶಸ್ತ್ರಚಿಕಿತ್ಸೆ ಮಾಡಿ ಕೋಲತಿಯ ದೃಷ್ಟಿಯನ್ನು ಮರಳಿಸುವ ಮೂಲಕ ವೈದ್ಯರು ಮಾನವೀಯತೆ ಮೆರೆದಿದ್ದಾರೆ.ಮೊದಲ ಬಾರಿಗೆ ಮಂಗನ ಕಣ್ಣಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಮನುಷ್ಯರಂತೆ ಮಂಗಕ್ಕೂ ಕೂಡ ಕಣ್ಣಿನ ಪೊರೆ ಸಮಸ್ಯೆ ಕಾಡುತ್ತದೆ.

ಲುವಾಸ್‌ನಲ್ಲಿನ ಅನಿಮಲ್ ಸರ್ಜರಿ ಮತ್ತು ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಆರ್‌ಎನ್ ಚೌಧರಿ ಅವರು ಮಂಗವನ್ನು ಹಂಸಿಯ ಪ್ರಾಣಿ ಪ್ರೇಮಿ ಮುನೀಶ್ ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಹೇಳಿದರು. ಕೋತಿಗೆ ಕಣ್ಣು ಕಾಣುತ್ತಿರಲಿಲ್ಲ ಈ ಹಿನ್ನಲೆ ಗೊತ್ತಿಲ್ಲದೇ ವಿದ್ಯುತ್‌ ತಂತಿ ಮೇಲೆ ಹಾರಿದ್ದು ವಿದ್ಯುತ್‌ ಪ್ರವಹಿಸಿದೆ ಇದರಿಂದ ಗಾಯಗೊಂಡ ಕೋತಿ ಕುಂಟುತ್ತಾ ನಡೆಯುತ್ತಿತ್ತು ಈ ವೇಳೆ ಇದನ್ನು ಕಂಡ ಚೌಧರಿ ನಂತರ ಚಿಕಿತ್ಸೆಗಾಗಿ ಕೋತಿಯನ್ನು ಲುವಾಸ್‌ನ ಶಸ್ತ್ರಚಿಕಿತ್ಸೆ ವಿಭಾಗಕ್ಕೆ ಕರೆತರಲಾಯಿತು ಎಂದರು.

ಪರೀಕ್ಷೆ ನಡೆಸಿದಾಗ ಎರಡು ಕಣ್ಣುಗಳಿಗೆ ಪೊರೆ ಬಂದಿರುವುದು ತಿಳಿದಿದೆ. ಬಳಿಕ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಈಗ ಮಂಗಕ್ಕೆ ಕಣ್ಣು ಕಾಣುತ್ತಿದೆ.

Ad
Ad
Nk Channel Final 21 09 2023
Ad